Home » ಏರ್‌ ಕ್ರಾಷ್‌ ದುರಂತ : 241 ಬಲಿ ಓರ್ವ ಪಾರು
 

ಏರ್‌ ಕ್ರಾಷ್‌ ದುರಂತ : 241 ಬಲಿ ಓರ್ವ ಪಾರು

ಅಹಮದಾಬಾದ್‌ನಲ್ಲಿ ಏ‌ರ್ ಇಂಡಿಯಾ ಡೀಮ್‌ಲೈನರ್ ವಿಮಾನ ಭೀಕರ ಪತನ | ಒಬ್ಬ ಮಾತ್ರ ಪಾರು, ಉಳಿದವರೆಲ್ಲ ಸಾವು ಹಾರಾಟ ಶುರುವಾದ ಕೆಲವೇ ಕ್ಷಣದಲ್ಲಿ ಘಟನೆ | ಗುಜರಾತ್ ಮಾಜಿ ಸಿಎಂ ರೂಪಾನಿ ಕೂಡಾ ಬಲಿ | ಸಾವಿನ ಸಂಖ್ಯೆ ಏರಿಕೆ ಭೀತಿ ದೇಶದ ಇತಿಹಾಸದಲ್ಲೇ 2ನೇ ಅತಿದೊಡ್ಡ ವಿಮಾನ ದುರಂತ , ವಿಮಾನ ಬಿದ್ದ ಕಾರಣ ಹಾಸ್ಟೆಲ್‌ನಲ್ಲಿದ್ದ 5 ಜನ ಬಲಿ

by Kundapur Xpress
Spread the love

ಅಹಮದಾಬಾದ್ : 230 ಪ್ರಯಾಣಿಕರು, 12 ಸಿಬ್ಬಂದಿಗಳನ್ನು ಹೊತ್ತು ಲಂಡನ್‌ ಹೊರಟಿದ್ದ ಏರಿಂಡಿಯಾದ ಬೋಯಿಂಗ್ ಕ್ರೀಮ್‌ ಲೈನರ್ ವಿಮಾನ ಪ್ರಯಾಣದ ಆರಂಭಿಸಿದ ಕೆಲ ಹೊತ್ತಿನಲ್ಲೇ ಪತನಗೊಂಡ ಭೀಕರ ದುರ್ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ದೇಶದ ಇತಿಹಾಸದಲ್ಲೇ 2ನೇ ಅತಿ ದೊಡ್ಡ ವೈಮಾನಿಕ ದುರಂತವಾಗಿದ್ದು, ಈ ವಿಮಾನದಲ್ಲಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ, ವಿಮಾನದ ಸಹಪೈಲಟ್ ಆಗಿದ್ದ ಕನ್ನಡಿಗ ಕ್ಲೈವ್ ಸುಂದ‌ರ್ ಮತ್ತು ಮುಖ್ಯ ಪೈಲಟ್ ಸುಮೀತ್ ಸೇರಿದಂತೆ 241 ಜನರು ಸಾವನ್ನಪ್ಪಿದ್ದಾರೆ. ಪವಾಡಸದೃಶ ಎನ್ನುವಂತೆ ವಿಶ್ವನಾಥ್ ಕುಮಾರ್ ರಮೇಶ್ ಎಂಬ ಬ್ರಿಟನ್ ಪ್ರಜೆ  ಬದುಕುಳಿದಿದ್ದಾರೆ. 

ವಿಮಾನವು ನಿಲ್ದಾಣದಿಂದ 5 ಕಿ.ಮೀ ದೂರದ ಮೇಘನಿ ನಗರ ಎಂಬಲ್ಲಿನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಅಪ್ಪಳಿಸಿದ್ದು, ಅಲ್ಲಿ ಕೂಡಾ 25ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ఎంబ ವರದಿಗಳು ಇವೆಯಾದರೂ ಈ ಕುರಿತು ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಘಟನೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್‌ಗೆ ದೌಡಾ ಯಿಸಿದ್ದು, ಪರಿಹಾರ ಕಾರ್ಯಗಳ ಪರಿಶೀಲನೆ , ನಡೆಸಿದ್ದು, ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

 

Related Articles

error: Content is protected !!