162
ಹೊಸದಿಲ್ಲಿ : ಹಲವಾರು ರಾಜಕೀಯ ನಾಯಕರು ಸೇರಿದಂತೆ ನಾಗರಿಕರು ಪ್ರಯಾಣಿಸುತ್ತಿದ್ದ ತಿರುವನಂತಪುರಂನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಭಾನುವಾರ ತಡರಾತ್ರಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ತಿರುವನಂತಪುರಂನಿಂದ ಹೊರಟ ಎಐ 2455 ವಿಮಾನದಲ್ಲಿ ಕೇರಳದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ, ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್ ಸೇರಿ ಇತರರು ಇದ್ದರು. ತಮ್ಮ ಈ ಆಘಾತಕಾರಿ ಅನುಭವ ಹಂಚಿಕೊಂಡ ಕೆ. ಸಿ. ವೇಣುಗೋಪಾಲ್, ಹಲವರು ಸಂಸದರು ಮತ್ತು ಇತರ ಪ್ರಯಾಣಿಕರಿದ್ದ ಎಐ ವಿಮಾನ ದುರಂತಕ್ಕೀಡಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ.
ವಿಮಾನ ನಿಗದಿತ ಸಮಯಕ್ಕಿಂತ ತಡವಾಗಿ ಹೊರಟಿತು. ನಂತರ ಪ್ರಯಾಣ ಭಯಾನಕವಾಗಿತ್ತು. ವಿಮಾನ ಟೇಕಾಫ್ ಆದ ಒಂದು ಗಂಟೆಯ ನಂತರ ವಿಮಾನದಲ್ಲಿ ಸಿಗ್ನಲ್ ಸಮಸ್ಯೆ ಇದೆ ಎಂದು ಪೈಲಟ್ ಹೇಳಿದ್ದರು.

