Home » ಬೈಕ್‌ಗೆ ಪತ್ನಿ ಶವ ಕಟ್ಟಿ ಒಯ್ದ ಪತಿ
 

ಬೈಕ್‌ಗೆ ಪತ್ನಿ ಶವ ಕಟ್ಟಿ ಒಯ್ದ ಪತಿ

by Kundapur Xpress
Spread the love

ನಾಗಪುರ :  ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಶವವನ್ನು ಯಾರೂ ಕೊಂಡೊಯ್ಯದ ಕಾರಣ, ವ್ಯಕ್ತಿಯೊಬ್ಬ ತನ್ನ ಬೈಕ್‌ಗೆ ಕಟ್ಟಿಕೊಂಡು ಹೊತ್ತೊಯ್ದ ದಾರುಣ ಘಟನೆ ಮಹಾರಾ ಷ್ಟದ ನಾಗಪುರದಲ್ಲಿ ನಡೆದಿದೆ.

ಇದರ ವಿಡಿಯೋ ವೈರಲ್ ಆಗಿದ್ದು ಎದೆ ಝಲ್ಲೆನ್ನಿಸುವಂತಿದೆ. ಗಾರ್ಸಿ ಎಂಬಾಕೆ ತಮ್ಮ ಪತಿ ಅಮಿತ್ ಯಾದವ್ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅನ್ಯ ರಾಜ್ಯದ ನೋಂದಣಿ ಸಂಖ್ಯೆ ಹೊಂದಿದ್ದ ಟ್ರಕ್ ಬಂದು ಡಿಕ್ಕಿ ಹೊಡೆದಿದೆ. ಆಗ ಆಕೆ ನೆಲಕ್ಕೆ ಬಿದ್ದಿದ್ದು, ಟ್ರಕ್ ಆಕೆಯ ಮೇಲೆ ಹರಿದು ಸಾವನ್ನಪ್ಪಿದ್ದಾರೆ.

ಈ ಸಂದರ್ಭದಲ್ಲಿ ಅಮಿತ್ ಅದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರರಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು. ಆದರೆ ಯಾರು ಕೂಡ ಸಹಾಯಕ್ಕೆ ಮುಂದೆ ಬರಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಅಮಿತ್ ಪತ್ನಿಯ ಶವವನ್ನು ತಮ್ಮ ಬೈಕ್‌ನಲ್ಲಿ ಕಟ್ಟಿಕೊಂಡು ತಮ್ಮ ಊರಿಗೆ ಹೊರಟಿದ್ದರು. ಬಳಿಕ ಪೊಲೀಸರು ಗಮನಿಸಿ ತಮ್ಮ ವ್ಯಾನ್‌ನಲ್ಲಿ ಶವವನ್ನು ಆಸ್ಪತ್ರೆಗೆ ಸಾಗಿಸಿ ಪೋಸ್ಟ್  ಮಾರ್ಟಂ ಮಾಡಿಸಿದ್ದಾರೆ. ಅಪಘಾತ ಮಾಡಿದ ಟ್ರಕ್ ಪತ್ತೆಗೆ ಬಲೆ ಬೀಸಿದ್ದಾರೆ.

 

Related Articles

error: Content is protected !!