Home » ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡಿದರೆ ಶಿಕ್ಷೆ
 

ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡಿದರೆ ಶಿಕ್ಷೆ

by Kundapur Xpress
Spread the love

ಹೊಸದಿಲ್ಲಿ : ರಾಹುಲ್ ಗಾಂಧಿ ಅವರು ಮತ-ಕಳ್ಳತನದ ಆರೋಪದ ಅಫಿಡವಿಟ್‌ಗೆ ಸಹಿ ಹಾಕಬೇಕು ಎಂಬುದನ್ನು ಚುನಾವಣಾ ಆಯೋಗ ಪುನರಾವರ್ತಿಸುತ್ತಿದ್ದಂತೆ, ಅಫಿಡವಿಟ್‌ ಗೆ ಸಹಿ ಹಾಕಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಈ ಘೋಷಣೆ ಪತ್ರಕ್ಕೆ ಸಹಿ ಹಾಕಿದರೇ ರಾಹುಲ್ ಗಾಂಧಿ ಅವರು ಕಾನೂನಿನ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಯಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಈ ವಿಚಾರ ಕರ್ನಾಟಕದ ಬೆಂಗಳೂರು ಸೆಂಟ್ರಲ್‌ನ ಒಂದು ಸ್ಥಾನಕ್ಕೆ ಸೀಮಿತವಾಗಿಲ್ಲ. ಇದು ದೇಶದ ವಿವಿಧ ಲೋಕಸಭಾ ಸ್ಥಾನಗಳಿಗೆ ವಿಸ್ತರಿಸಿದೆ. ಚುನಾವಣಾ ಆಯೋಗಕ್ಕೆ ತನ್ನ ಬಳಿ ಸಾಕಷ್ಟು ಪುರಾವೆಗಳಿಲ್ಲ ಎಂದು ತಿಳಿದಿದೆ. ಅದೇ ಕಾರಣಕ್ಕೆ ಅದನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. 

ನಾನು ಅಫಿಡವಿಟ್‌ಗೆ ಏಕೆ ಸಹಿ ಹಾಕಬೇಕು ? ಇದು ಅವರ ದತ್ತಾಂಶ, ನನ್ನದಲ್ಲ. ತನ್ನ ಮೇಲಿನ ಅಪವಾದದಿಂದ ಹೊರಬರಲು ಚುನಾವಣಾ ಆಯೋಗವು ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ. ಇಂದು, ಚುನಾವಣಾ ಆಯೋಗ ತನ್ನ ತಪ್ಪನ್ನು ಮರೆಮಾಚಲು ಪ್ರಯತ್ನಿಸುತ್ತಿದೆ, ಆದರೆ ಒಂದು ದಿನ ಎಲ್ಲವೂ ಬೆಳಕಿಗೆ ಬರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಹಿ ಹಾಕಿದರೆ ಜೈಲು ಶಿಕ್ಷೆ? :

ಮತದಾರ ಪಟ್ಟಿಗಳಿಗೆ ಸಂಬಂಧಿಸಿದಂತೆ ಸುಳ್ಳು ಆರೋಪ ಮಾಡುವುದು 1950ರ ಆರ್‌ಪಿ ಕಾಯ್ದೆಯ ಸೆಕ್ಷನ್ 31ರಲ್ಲಿ ಶಿಕ್ಷಾರ್ಹ ಎಂದು ಕಾನೂನು ಹೇಳುತ್ತದೆ. ಸುಳ್ಳು ಸಾಕ್ಷ್ಯವನ್ನು ನೀಡುವುದು ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 337 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ.

 

Related Articles

error: Content is protected !!