Home » ಭಾರತಕ್ಕೆ ಏರ್‌ ಶಿಪ್ ಬಲೂನ್‌ ಬಲ
 

ಭಾರತಕ್ಕೆ ಏರ್‌ ಶಿಪ್ ಬಲೂನ್‌ ಬಲ

by Kundapur Xpress
Spread the love

ನವದೆಹಲಿ : ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿಯಲ್ಲಿ ತೈಷಮಯ ಪರಿಸ್ಥಿತಿ ಸೃಷ್ಟಿಯಾಗಿರುವಾಗಲೇ ಭೂಮಿಯಿಂದ ಸುಮಾರು 20 ಕಿ.ಮೀ. ಎತ್ತರದಲ್ಲಿ ನಿಂತು ಗಡಿಯ ಮೇಲೆ ಬಿಗಿ ಕಣ್ಣಾವಲು ಇಡುವ ಬಲೂನ್ ಮಾದರಿಯ ‘ಏರ್‌ಶಿಪ್’ನ ಚೊಚ್ಚಲ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ನಡೆಸಿದೆ. ವಾಯುಮಂಡಲದಲ್ಲಿ 2ನೇ ಪದರವಾಗಿರುವ ಸಮೋಷ್ಣ ವಲಯ (ಸ್ಟ್ರಾಟೋಸ್ಪಿಯರ್)ಕ್ಕೆ ಏರ್‌ಶಿಪ್ ನಿಯೋಜಿಸುವ ತಂತ್ರಜ್ಞಾನ ವಿಶ್ವದ ಕೆಲವೇ ದೇಶಗಳ ಬಳಿ ಇದ್ದು, ಅದು ಈಗ ಭಾರತಕ್ಕೂ ದಕ್ಕಿದಂತಾಗಿದೆ.

‘ಸ್ಟ್ಯಾಟ್ರೋಸ್ಪಿಯರಿಕ್ ಏರ್‌ಶಿಪ್ ಪ್ಲಾ ಟ್‌ಫಾರಂ’ ಹೆಸರಿನ ಈ ಪ್ರಯೋಗವನ್ನು ಮಧ್ಯಪ್ರದೇಶದ ಶೂಪುರ್‌ ಪರೀಕ್ಷಾರ್ಥ ಕೇಂದ್ರದಲ್ಲಿ ಡಿಆರ್‌ಡಿಒ ನೆರವೇರಿಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

 

Related Articles

error: Content is protected !!