73
ಶ್ರೀನಗರ : ಭಾರೀ ಮಳೆಯಿಂದ ಸ್ಥಗಿತಗೊಂಡಿದ್ದ ಅಮರನಾಥಯಾತ್ರೆ ಒಂದು ದಿನದ ಬಳಿಕ ಶುಕ್ರವಾರ ಮತ್ತೆ ಪುನರಾರಂಭಗೊಂಡಿದೆ
7,908 ಯಾತ್ರಾರ್ಥಿಗಳ ತಂಡ ಶುಕ್ರವಾರ ಜಮ್ಮುವಿನಿಂದ ಕಾಶ್ಮೀರಕ್ಕೆ ಹೊರಟಿದೆ. ಜುಲೈ 3ರಂದು ಅಮರನಾಥ ಯಾತ್ರೆ ಪ್ರಾರಂಭವಾದಾಗಿನಿಂದ ಇದುವರೆಗೆ 2.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಯಾತ್ರೆ ಮಾಡಿದ್ದಾರೆ. 7, 908 ಯಾತ್ರಿಕರ ಮತ್ತೊಂದು ತಂಡ ಶುಕ್ರವಾರ ಭಗವತಿ ನಗರ ಯಾತ್ರಾ ನಿವಾಸದಿಂದ ಎರಡು ಬೆಂಗಾವಲು ಪಡೆಗಳಲ್ಲಿ ಕಣಿವೆಗೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ

