ಶ್ರೀನಗರ: ದಕ್ಷಿಣ ಕಾಶ್ಮೀರದ 3,880 ಮೀಟರ್ ಎತ್ತರದ ಗುಹಾ ದೇಗುಲ ಅಮರನಾಥ ಯಾತ್ರೆ ನಾಳೆ ಜೂನ್ 29 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ. ಸ್ಥಳದಲ್ಲೇ ಯಾತ್ರಿಕರ ನೋಂದಣಿ, ಕ್ಯಾಂಪಿಂಗ್ ಸೌಲಭ್ಯಗಳು, ವೈದ್ಯಕೀಯ ಸೌಲಭ್ಯಗಳು, ಟ್ರ್ಯಾಕ್ಗಳನ್ನು ನವೀಕರಿಸುವುದು, ವಿದ್ಯುತ್ ಮತ್ತು ನೀರು ಸರಬರಾಜು ಮತ್ತು ಮೊಬೈಲ್ ಫೋನ್ ಸಂಪರ್ಕ ಒದಗಿಸುವುದು ಸೇರಿದಂತೆ ತೀರ್ಥಯಾತ್ರೆಯನ್ನು ಸುಗಮವಾಗಿ ನಡೆಸಲು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಮ್ಮು-ಕಾಶ್ಮೀರ ಆಡಳಿತ ತಿಳಿಸಿದೆ
ಎಲ್ಲ ಯಾತ್ರಾರ್ಥಿಗಳಿಗೆ ಆರ್ಎಫ್ಐಡಿ ಕಾರ್ಡ್ಗಳನ್ನು ನೀಡಲಾಗುವುದು ಇದರಿಂದ ಯಾತ್ರಾರ್ಥಿ ಇರುವ ಸ್ಥಳವನ್ನು ಪತ್ತೆಹಚ್ಚಬಹುದು. ಅಂತೆಯೇ ಎಲ್ಲರಿಗೂ 5 ಲಕ್ಷ ರೂಪಾಯಿ ವಿಮಾ ರಕ್ಷಣೆ ನೀಡುವ ಸಾಧ್ಯತೆಯಿದೆ. ಯಾತ್ರೆಗೆ ಮುಂಚಿತವಾಗಿ, ಆಡಳಿತವು ಯಾತ್ರಾರ್ಥಿಗಳಿಗೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭದ್ರತಾ ಕಾಳಜಿಗಳ ಕುರಿತು ಮಾರ್ಗಸೂಚಿಗಳನ್ನು ನೀಡಿದೆ.