ವಾಷಿಂಗ್ಟನ್ : ಅಮೆರಿಕ ಮಾಜಿ ಅಧ್ಯಕ್ಷರಾದ ಜೋ ಬೈಡನ್ (82 ವರ್ಷ) ಅವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಯತ್ನಗಳು ನಡೆದಿವೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಬೈಡನ್‌ಗೆ ಮೂತ್ರವಿಸರ್ಜನೆ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ, ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಸಹಾಯಕ ಗ್ರಂಥಿಯಾಗಿರುವ ಪ್ರೋಸ್ಟೇಟ್‌ನಲ್ಲಿ ಗಂಟುಗಳಿರುವುದು ಪತ್ತೆಯಾಗಿದೆ. ಇದು ಈಗಾಗಲೇ ಮೂಳೆಗಳಿಗೂ ಹರಡಿದೆ.
ಈ ಕ್ಯಾನ್ಸರ್‌ನ ಅಪಾಯವನ್ನು ಗ್ಲೀಸನ್ ಸ್ಕೋರ್ ನಲ್ಲಿ 6 ರಿಂದ 10ರ ವರೆಗೆ ಅಂಕ ನೀಡುವ ಮೂಲಕ ಅಳೆಯಬಹುದು. ಈ ಬಗ್ಗೆ ಮಾಹಿತಿ ನೀಡಿರುವ ವೈಟ್ ಹೌಸ್, ಈ ಕ್ಯಾನ್ಸರ್ ಅಪಾಯಾರಿಯಾದರೂ, ಪ್ರೊಜೆಸ್ಸಿ ರೋನ್ ನಂತಹ ಹಾರ್ಮೋನ್ ಗಳೊಂದಿಗೆ ಸ್ಪಂದಿಸುವ ಕಾರಣ, ಅದನ್ನು ಸುಲಭವಾಗಿ ನಿರ್ವಹಿಸಬಹುದು. ಗ್ಲೀಸನ್ ಸ್ಕೋರ್‌ನಲ್ಲಿ ಬೈಡನ್‌ರಿಗಿರುವ ಕ್ಯಾನ್ಸರ್ 9 ಅಂಕ ಪಡೆದಿದ್ದು, ಅಪಾಯಕಾರಿ ಎಂದು ಪರಿಗಣಿಸಲಾಗಿದೆ’ ಎಂದು ಹೇಳಿದೆ
ಗುಣಮುಖರಾಗಿ -ಮೋದಿ
ಬೈಡೆನ್‌ರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿರುವುದರ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬೈಡೆನ್ ಆರೋಗ್ಯದ ಬಗ್ಗೆ ಕಳವಳವಿದೆ. ಅವರು ಬೇಗ ಸಂಪೂರ್ಣ ಗುಣಮುಖರಾಗಲಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಪ್ರಾರ್ಥಿಸಿದ್ದಾರೆ

