ಹೊಸದಿಲ್ಲಿ : ಪಹಲ್ಲಾಮ್ ಭಯೋತ್ಪಾದಕ ದಾಳಿಯ ಬೆನ್ನಿಗೇ ರಾಷ್ಟ್ರೀಯ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದ ನಂತರ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತೀಯ ಗುಪ್ತಚರ ಸಂಸ್ಥೆಗಳು ಮೂರು ರಾಜ್ಯಗಳಲ್ಲಿ 9 ವ್ಯಕ್ತಿಗಳನ್ನು ಬಂಧಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಹಲವು ರಾಜ್ಯಗಳಲ್ಲಿ ಟ್ರಾವೆಲ್ ಬ್ಲಾಗರ್, ರಾಜಕೀಯ ವಿಜ್ಞಾನ ವಿದ್ಯಾರ್ಥಿ, ಉದ್ಯಮಿ ಮತ್ತು ಭದ್ರತಾ ಸಿಬ್ಬಂದಿ ಹೀಗೆ ವಿವಿಧ ರೂಪಗಳಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ.
ಮೂರು ರಾಜ್ಯಗಳಲ್ಲಿ ಜಾಲ :
ಹರ್ಯಾಣದ ಹಿಸಾರ್ ನಲ್ಲಿ, ‘ಟ್ರಾವೆಲ್ ವಿತ್ ಜೆಒ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಲೋತ್ರಾ (33) ಪಾಕಿಸ್ತಾನದೊಂದಿಗೆ ಮಿಲಿಟರಿ ಮಾಹಿತಿ ಹಂಚಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಆಕೆ ಪಾಕಿಸ್ತಾನದ ಹೈಕಮಿಷನ್ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪಂಜಾಬ್‌ನ ಮಲೇರ್ಕೋಟ್ಲಾದಲ್ಲಿ, ಪಾಕಿಸ್ತಾನದ ಮಾಜಿ ಹೈಕಮಿಷನ್ ಸಿಬ್ಬಂದಿ ಡ್ಯಾನಿಶ್ ಜತೆ ಕೆಲಸ ಮಾಡಿದ್ದಕ್ಕಾಗಿ ಗಜಾಲಾ (32) ಮತ್ತು ಯಮೀನ್ ಮೊಹಮ್ಮದ್ ಅವರನ್ನು ಬಂಧಿಸಲಾಗಿದೆ. ಅವರು ಬೇಹುಗಾರಿಕೆ ಚಟುವಟಿಕೆಗಳಿಗಾಗಿ ಹಣವನ್ನೂ ಪಡೆದಿದ್ದರು. ಅಲ್ಲದೆ, ವೀಸಾ ಮತ್ತು ಹಣ ವರ್ಗಾವಣೆ ದಂಧೆಯ ಭಾಗವಾಗಿದ್ದರು ಎಂಬುದು ಬಯಲಾಗಿದೆ.
ಹರ್ಯಾಣದ ಕೈಥಾಲ್‌ನಲ್ಲಿ, ರಾಜಕೀಯ ವಿಜ್ಞಾನ ವಿದ್ಯಾರ್ಥಿ ದೇವೇಂದ್ರ ಸಿಂಗ್ ಧಿಲ್ಲೋನ್ (25) ನನ್ನು, ಪಾಟಿಯಾಲ ಮಿಲಿಟರಿ ಕಂಟೋನ್ಸೆಂಟ್ನ ಚಿತ್ರಗಳನ್ನು ಪಾಕಿಸ್ತಾನದ ಐಎಸ್‌ಐ ಜತೆ ಹಂಚಿಕೊಂಡಿದ್ದಕ್ಕಾಗಿ ಬಂಧಿಸಲಾಗಿದೆ. ವಿಚಾರಣೆಯ ವೇಳೆಗೆ ಈತನ ಮೇಲಿದ್ದ ಅನುಮಾನಗಳು ದೃಢಪಟ್ಟಿವೆ

