Home » ಭಾರತದ ಜೊತೆ ಶೀಘ್ರ ಬಿಗ್ ಡೀಲ್‌ : ಟ್ರಂಪ್
 

ಭಾರತದ ಜೊತೆ ಶೀಘ್ರ ಬಿಗ್ ಡೀಲ್‌ : ಟ್ರಂಪ್

by Kundapur Xpress
Spread the love

ವಾಷಿಂಗ್ಟನ್ : ಪ್ರತಿತೆರಿಗೆ ಮೂಲಕ ವಿಶ್ವದ ಬಹುತೇಕ ದೇಶಗಳನ್ನು ಬೆದರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾವು ಶೀಘ್ರವೇ ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಭಾರತ ಮತ್ತು ಅಮೆರಿಕ ಶೀಘ್ರವೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸುಳಿವನ್ನು ಟ್ರಂಪ್ ನೀಡಿದ್ದಾರೆ.

ಶ್ವೇತಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರ ಮವೊಂದರಲ್ಲಿ ಮಾತನಾಡಿದ ಟ್ರಂಪ್, ‘ನಾವು ಈಗಾಗಲೇ ಹಲವು ಅದ್ಭುತ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಶೀಘ್ರವೇ ಇನ್ನೊಂದು ಒಪ್ಪಂದ ಆಗಲಿಕ್ಕಿದೆ, ಬಹುಶಃ ಅದು ಭಾರತದ ಜೊತೆಗೆ ಆಗಿರಲಿದೆ. ನಾವು ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಭಾರತವನ್ನು ನಾವು ಇನ್ನಷ್ಟು ಮುಕ್ತಗೊಳಿಸಲಿದ್ದೇವೆ’ ಎಂದು ಹೇಳಿದ್ದಾರೆ.

ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದ ಕುರಿತು ಮುಂದಿನ ಹಂತದ ಮಾತುಕತೆಗಾಗಿ ವಾಣಿಜ್ಯ ಸಚಿವಾಲಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್‌ವಾಲ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಅಮೇರಿಕಕ್ಕೆ ಬಂದಿಳಿದಿದೆ ಅದರ ಬೆನ್ನಲ್ಲೇ ಟ್ರಂಪ್‌ ಈ ಮಹತ್ವದ ಹೇಳಿಕೆ ನೀಡಿದ್ದಾರೆ 

 

Related Articles

error: Content is protected !!