ದೇವೋರಿಯ : ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಿಸಿದವರು ಮತ್ತು ರಾಮಭಕ್ತರಿಗೆ ಗುಂಡು ಹಾರಿಸಿದವರ ನಡುವಿನ ಹೋರಾಟವಾಗಿದೆ ಪ್ರಸಕ್ತ ಲೋಕಸಭಾ ಚುನಾವಣೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಕಾಂಗ್ರೇಸ್ ನೇತೃತ್ವದಲ್ಲಿ ವಿಪಕ್ಷಗಳು ಬರೋಬ್ಬರಿ 70 ವರ್ಷಗಳಿಂದ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದವು ಮತ್ತು ಈ ವಿಚಾರವನ್ನು ಮೂಲೆಗುಂಪು ಮಾಡಿದ್ದವು. ಇದರ ಹೊರತೂ ಪ್ರಧಾನಿ ನರೇಂದ್ರ ಮೋದಿಯವರ ದೃಢ ಸಂಕಲ್ಪ-ಹರಸಾಹಸಗಳ ಪರಿಣಾಮ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಕೊನೆಗೂ ಸಾಕಾರಗೊಂಡಿದೆ ಎಂದರು ಅವರು ಬಿಜೆಪಿ ಅಭ್ಯರ್ಥಿ ಶಶಾಂಕ್ ಮಣಿ ತ್ರಿಪಾಠಿ ಪರ ದೇವೋರಿಯಾದಲ್ಲಿ ಚುನಾವಣಾ ಸಭೆಯಲ್ಲಿ ಸಚಿವರು ಪಾಲ್ಗೊಂಡರು.