ಬಸ್ತರ್ : ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುವಂತೆ ನಕ್ಸಲರಿಗೆ ಮನವಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಲ್ಲದಿದ್ದರೆ ಅವರು ಭದ್ರತಾ ಪಡೆಗಳ ಕಠಿಣ ಕ್ರಮವನ್ನು ಎದುರಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು
ಛತ್ತೀಸ್‌ಗಢದ ಜಗದಲ್ಪುರದಲ್ಲಿ ಆಯೋಜಿಸಲಾಗಿದ್ದ ಬಸ್ತರ್ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ. 2026ರ ಮಾರ್ಚ್ ವೇಳೆಗೆ ದೇಶ ಮಾವೋವಾದಿಗಳಿಂದ ಮುಕ್ತವಾಗಲಿದೆ ಎಂದು ಪುನರುಚ್ಚರಿಸಿದರು. ನಕ್ಸಲರು ತಾವಾಗಿಯೇ ಮುಂದೆ ಬಂದು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿ ಮುಖ್ಯವಾಹಿನಿಗೆ ಸೇರಬೇಕು. ಶರಣಾದ ನಕ್ಸಲರ ಪುನರ್ವಸತಿ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಶರಣಾಗತಿಯ ಮನವಿಯನ್ನು ಕೇಳದೇ ಇದ್ದರೆ, ಭದ್ರತಾ ಪಡೆಗಳೇ ಅವರನ್ನು ಹತ್ತಿಕ್ಕುತ್ತವೆ ಎಂದು ಎಚ್ಚರಿಕೆಯನ್ನೂ ನೀಡಿದರು.