Home » 5 ರೈಲು ನಿಲ್ದಾಣ ಲೋಕಾರ್ಪಣೆ
 

5 ರೈಲು ನಿಲ್ದಾಣ ಲೋಕಾರ್ಪಣೆ

ಅಮೃತ ಭಾರತಿ ಯೋಜನೆ

by Kundapur Xpress
Spread the love

ಹುಬ್ಬಳ್ಳಿ : ಅಮೃತ ಭಾರತ ಯೋಜನೆಯಡಿ ನೈರುತ್ಯ ರೈಲ್ವೆ ವ್ಯಾಪ್ತಿಯ ರಾಜ್ಯದಲ್ಲಿ ಐದು ರೈಲು ನಿಲ್ದಾಣಗಳನ್ನು ಪ್ರಧಾನಿ ಮೋದಿ ಅವರು ಗುರುವಾರ ವರ್ಚ್ಯುವಲ್ ಮೂಲಕ ಲೋಕಾರ್ಪಣೆಗೊಳಿಸಿದರು. ಉತ್ತರ ಕರ್ನಾಟಕದ ಧಾರವಾಡ, ಗದಗ, ಮುನಿರಾಬಾದ್, ಬಾಗಲಕೋಟೆ, ಗೋಕಾಕ್‌ನ ಅಮೃತ ಭಾರತ ರೈಲು ನಿಲ್ದಾಣಗಳು ಲೋಕಾರ್ಪಣೆಗೊಂಡವು.

ಒಟ್ಟು 90.01 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ 5 ನಿಲ್ದಾಣಗಳು ಅಭಿವೃದ್ಧಿಗೊಂಡಿವೆ. ಇದರಲ್ಲಿ ಗದಗ ನಿಲ್ದಾಣ 23.24 ಕೋಟಿ ರೂ., ಮುನಿರಾಬಾದ್ ನಿಲ್ದಾಣ 18.40 ಕೋಟಿ ರೂ., ಗೋಕಾಕ್ ನಿಲ್ದಾಣ 18.21 ಕೋಟಿ ರೂ., ಧಾರವಾಡ ನಿಲ್ದಾಣ 17 ಕೋಟಿ ರೂ., ಬಾಗಲಕೋಟೆ ನಿಲ್ದಾಣ 16.06 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿವೆ. ವಿಮಾನ ನಿಲ್ದಾಣ ಮಾದರಿಯಲ್ಲಿ ರೈಲು ನಿಲ್ದಾಣಗಳು ಅಭಿವೃದ್ಧಿಪಡಿಸಲಾಗಿದ್ದು, ಪ್ರಯಾಣಿಕರು ನಿಲ್ದಾಣದಲ್ಲಿಯೇ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.

 

Related Articles

error: Content is protected !!