Home » 10 ಗಂಟೆ ಕಾಲ ಅನಿಲ್ ಅಂಬಾನಿ ಇ.ಡಿ. ತನಿಖೆ
 

10 ಗಂಟೆ ಕಾಲ ಅನಿಲ್ ಅಂಬಾನಿ ಇ.ಡಿ. ತನಿಖೆ

17‌,000 ಕೋಟಿ ಅಕ್ರಮ

by Kundapur Xpress
Spread the love

ನವದೆಹಲಿ : 17,000 ಕೋಟಿ ರು. ಸಾಲ ಅಕ್ರಮಕ್ಕೆ ಸಂಬಂಧಿಸಿ ಅನಿಲ್ ಅಂಬಾನಿ ಅವರು ಮಂಗಳವಾರ ಜಾರಿ ನಿರ್ದೇಶ ನಾಲಯ (ಇ.ಡಿ) ಎದುರು ಹಾಜರಾದರು. ಅವರನ್ನು 10 ಗಂಟೆಗಳ ಕಾಲ ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದರು.

ಅನಿಲ್ ಅಂಬಾನಿ ಅವರು ತಮ್ಮ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಟರ್ ಸೇರಿದಂತೆ ಹಲವು ಕಂಪನಿಗಳಿಗೆ ಸಾಲ ಪಡೆದು ಅದನ್ನು ಬೇರೆ ಬೇರೆ ಕಂಪನಿಗಳಿಗೆ ಅಕ್ರಮವಾಗಿ ವರ್ಗಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ಜೊತೆಗೆ ಯಸ್ ಬ್ಯಾಂಕ್‌ನಿಂದ ಸಾಲ ಪಡೆಯಲು ಲಂಚ ನೀಡಿದ ಅರೋಪವೂ ಅವರ ಮೇಲಿದೆ. ಅನಿಲ್ ವಿರುದ್ಧ ಇತ್ತೀಚೆಗೆ ಇ.ಡಿ. ಲುಕೌಟ್ ನೋಟಿಸ್‌ ಜಾರಿ ಮಾಡಿತ್ತು.

 

Related Articles

error: Content is protected !!