Home » ಅನಿಲ್‌ ಅಂಬಾನಿ ವಿರುದ್ದ ಲುಕ್‌ಔಟ್‌ ನೋಟಿಸ್‌ ಜಾರಿ
 

ಅನಿಲ್‌ ಅಂಬಾನಿ ವಿರುದ್ದ ಲುಕ್‌ಔಟ್‌ ನೋಟಿಸ್‌ ಜಾರಿ

by Kundapur Xpress
Spread the love

ನವದೆಹಲಿ : 17000 ಕೋಟಿ ರು. ಮೊತ್ತದ ಸಾಲದ ಹಣವನ್ನು ಬೇರೆ ಕಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ  ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಉದ್ಯಮಿ ಅನಿಲ್‌ ಅಂಬಾನಿಗೆ ಸಮನ್ಸ್ ಜಾರಿ ಮಾಡಿದೆ. ಇದೇ ವೇಳೆ ಅಂಬಾನಿ ವಿದೇಶಕ್ಕೆ ಹೋಗದಂತೆ ನಿರ್ಬಂಧ ವಿಧಿಸಿ ಲುಕ್‌ಔಟ್ ನೋಟೀಸ್‌ ನೀಡಲಾಗಿದೆ

ಈ ಮೂಲಕ ದೇಶ ಭ್ರಷ್ಟಉದ್ಯಮಿ ವಿಜಯ ಮಲ್ಯ ರೀತಿ ದೇಶ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿದೆ ಅಲ್ಲದೆ, ಅವರ ಒಡೆತನದ ಹಲವು ಕಂಪನಿಗಳ ನಿರ್ದೇಶಕರಿಗೂ ಇದೇ ರೀತಿಯ ನೋಟಿಸ್‌ ನೀಡಲಾಗಿದೆ ಎನ್ನಲಾಗಿದೆ.

ಅನಿಲ್‌ ಒಡೆತನದ ಕಂಪನಿಗಳು ಬ್ಯಾಂಕ್ ನಿಂದ ಸಾಲವಾಗಿ ಪಡೆದ ಹಣವನ್ನು ಅಕ್ರಮವಾಗಿ ಬೇರೆ ಬೇರೆ ಕಡೆ ವರ್ಗಾಯಿಸಿ ಹಣ ಲಪಟಾಯಿಸಿದ ಆರೋಪವಿದೆ. ಅಲ್ಲದೆ, ಅನುಮೋದನೆಗೂ ಮೊದಲೇ ಅವರ ಕಂಪನಿ ಖಾತೆಗೆ ಸಾಲದ ಹಣ ಜಮೆ ಆಗಿದೆ ಎನ್ನಲಾಗಿದೆ. ಈ ವಿಷಯದಲ್ಲಿ ಹೂಡಿಕೆದಾರರು, ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಯನ್ನೂ ವಂಚಿಸಿದ ಆರೋಪವಿದೆ

 

Related Articles

error: Content is protected !!