Home » ಪಂಜಾಬ್: ಉಗ್ರ ದಾಳಿ ಸಂಚು ತಡೆದ ಪೊಲೀಸರು
 

ಪಂಜಾಬ್: ಉಗ್ರ ದಾಳಿ ಸಂಚು ತಡೆದ ಪೊಲೀಸರು

by Kundapur Xpress
Spread the love

ಚುಡೀಗಢ : ಪಂಜಾಬ್ ಪೊಲೀಸರು ಪಾಕ್ ಉಗ್ರರ ಅತಿದೊಡ್ಡ ದಾಳಿಯ ಸಂಚು ವಿಫಲ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ದಾಳಿಗೆಂದು ಪಾಕ್ ಮೂಲದ ಉಗ್ರ ಹರ್ವಿಂದರ್ ರಿಂಡಾ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿ ಅರಣ್ಯದಲ್ಲಿ ಸಂಗ್ರಹಿಸಿದ್ದ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾರತದಲ್ಲಿ ದಾಳಿಗೆ ಪಾಕಿಸ್ತಾನಿ ಏಜೆನ್ಸಿಗಳು ಮತ್ತು ರಿಂಡಾ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎನ್ನುವ ಗುಪ್ತಚರ ಮಾಹಿತಿ ಪೊಲೀಸರಿಗೆ ಲಭ್ಯವಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಎಜಿಟಿಎಫ್ ಪಡೆ ದಾಳಿಗೂ ಮುನ್ನ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. 2 ಎಕೆ-47 ರೈಫಲ್, 16 ಲೈವ್ ಕಾರ್ಟ್‌ರಿಡ್ಜ್ ಸೇರಿ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

 

Related Articles

error: Content is protected !!