ಹೊಸದಿಲ್ಲಿ : ಭಾರತ ಈ ತಿಂಗಳು ಅಮೆರಿಕದಿಂದ ಮೊದಲ ಬ್ಯಾಚ್‌ನ ಅಪಾಚೆ ಎಎಚ್-64ಇ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಲು ಸಜ್ಜಾಗಿದ್ದು, ಇದರೊಂದಿಗೆ ಈ ಸುಧಾರಿತ ಹೆಲಿಕಾಪ್ಟರ್‌ಗಳಿಗಾಗಿ ಸುದೀರ್ಘ ಕಾಯುವಿಕೆ ಕೊನೆಗೊಳ್ಳಲಿದೆ. ಇವುಗಳನ್ನು ಭಾರತ ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆಯಿದೆ.
2020ರಲ್ಲಿ ಸಹಿ ಹಾಕಲಾದ 600 ಮಿಲಿಯನ್ ಡಾಲರ್ ಒಪ್ಪಂದದಲ್ಲಿ ಭಾರತೀಯ ಸೇನೆ ತಲಾ ಆರು ಅಪಾಚೆಗಳ ಮೂರು ಬ್ಯಾಚ್ ಗಳಿಗೆ ಆರ್ಡರ್ ನೀಡಿತ್ತು. 2024ರ ಮಧ್ಯದ ವೇಳೆಗೆ ಇವುಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳಿಂದಾಗಿ ವಿತರಣೆ 15 ತಿಂಗಳುಗಳಿಗಿಂತ ಹೆಚ್ಚು ವಿಳಂಬವಾಯಿತು. ಆರಂಭಿಕ ಬ್ಯಾಚ್ ಮೂರು ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರಲಿದೆ ಎಂದು ಮೂಲಗಳು ಖಚಿತಪಡಿಸಿವೆ
ಜೋಧ್ಪುರದಲ್ಲಿ ಅಪಾಚೆ ಸ್ಥಾಡ್ರನ್ ಅನ್ನು ಮಾರ್ಚ್ 2024 ರಲ್ಲಿ ಔಪಚಾರಿಕವಾಗಿ ಸ್ಥಾಪಿಸಲಾಯಿತು. ಭಾರತೀಯ ವಾಯುಪಡೆ ಈಗಾಗಲೇ 2015 ರಿಂದ ಹಿಂದಿನ ಒಪ್ಪಂದದಲ್ಲಿ 22 ಹೆಲಿಕಾಪ್ಟರ್ ಗಳನ್ನು ಸೇರಿಸಿಕೊಂಡಿದೆ. ಈ ವಿತರಣೆ, ಭಾರತದ ಆಕ್ರಮಣಕಾರಿ ಹೆಲಿಕಾಪ್ಟರ್ ಪ್ಲೇಟ್ ಅನ್ನು ಮತ್ತಷ್ಟು ಬಲಶಾಲಿಯಾಗಿಸಲಿದೆ. ಇದು ಗಡಿ ಭದ್ರತೆ ಮತ್ತು ಯುದ್ಧ ಸನ್ನದ್ಧತೆಗೆ ನಿರ್ಣಾಯಕವಾಗಿದೆ

