81
ತಿರುಪತಿ : ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಒಂದೇ ದಿನ 5.3 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ. ಇದು ಕಳೆದೊಂದು ವರ್ಷದಲ್ಲಿ ದಿನದಲ್ಲಿ ಸಂಗ್ರಹವಾದ ಅತ್ಯಧಿಕ ಮೊತ್ತವಾಗಿದೆ
ತಿರುಮಲಕ್ಕೆ ಸೋಮವಾರ ಒಂದೇ ದಿನ 78,730 ಭಕ್ತರು ಭೇಟಿ ನೀಡಿದ್ದರು. ಇದು ಹಬ್ಬ, ರಜಾ ದಿನಗಳಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಗಿಂತ ಕಡಿಮೆ. ಹೀಗಿದ್ದರೂ ಒಂದೇ ದಿನ 5.3 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ.
2023ರ ಜ. 2 ರಂದು ದೇಗುಲದಲ್ಲಿ ಒಂದೇ ದಿನ 7.7 ಕೋಟಿ ರು. ಸಂಗ್ರಹವಾಗಿ ದಾಖಲೆ ಬರೆದಿತ್ತು. ಹಲವು ಸಲ ತಿರುಪತಿಯಲ್ಲಿ 1 ದಿನಕ್ಕೆ 6 ಕೋಟಿ ಗಿಂತಲೂ ಅಧಿಕ ಕಾಣಿಕೆ ಬಂದ ನಿದರ್ಶನಗಳಿವೆ.

