Home » ಪಾಕ್ ಪರ ಬೇಹುಗಾರಿಕೆ : ಪಠಾಣ್ ಖಾನ್ ಸೆರೆ
 

ಪಾಕ್ ಪರ ಬೇಹುಗಾರಿಕೆ : ಪಠಾಣ್ ಖಾನ್ ಸೆರೆ

12 ವರ್ಷದಿಂದ ಪಾಕ್ ಪರ ಬೇಹುಗಾರಿಕೆ

by Kundapur Xpress
Spread the love

ಜೈಸಲ್ಮೇರ್ : ಹಣದ ಆಸೆಗಾಗಿ ಕಳೆದ12 ವರ್ಷದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಪಠಾಣ್ ಖಾನ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಈತ ಬಿಎಸ್‌ಎಫ್‌ನ ಚಲನವಲನ, ಚಟುವಟಿಕೆ, ಗಡಿ ನಿಯೋಜನೆ ಮೊದಲಾದ ವಿಷಯಗಳ ಬಗ್ಗೆ ಪಾಕಿಸ್ತಾನದ ಜೊತೆ ಮಾಹಿತಿ ಹಂಚಿಕೊಂಡಿರುವುದು ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕಳೆದ ತಿಂಗಳು ಜೈಸಲ್ಮೇರ್ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆವೇಳೆ ತನ್ನ ಹೆಸರು ರವಿ ಕಿಶನ್, ನಾನು ರೈತ ಎಂದು ಹೇಳಿದ್ದ. ಆದರೆ ತೀವ್ರ ವಿಚಾರಣೆ ವೇಳೆ ಈತನ ಹೆಸರು ಪಠಾಣ್ ಖಾನ್ ಎಂದು ದೃಢಪಟ್ಟಿದೆ.

2013ರಲ್ಲಿ ಖಾನ್ ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಐಎಸ್‌ಐ, ಈತನಿಗೆ ಹಣದ ಆಮಿಷ ಒಡ್ಡಿ ತನ್ನ ಪರ ಗೂಢಚರ್ಯೆಗೆ ಒಪ್ಪಿಸಿತ್ತು. ಅದರಂತೆ ಆತ 12 ವರ್ಷಗಳಿಂದ ನಿರಂತರವಾಗಿ ಐಎಸ್‌ಐಗೆ ಸೇನೆಯ ಮಾಹಿತಿಯನ್ನು ನಾನಾ ಸಾಮಾಜಿಕ ಜಾಲತಾಣಗಳ ಮೂಲಕ ನೀಡುತ್ತಿದ್ದ. ಇದಕ್ಕೆ ಆತನಿಗೆ ನಿರಂತರವಾಗಿ ಹಣ ಕೂಡಾ ಪಾವತಿಯಾಗುತ್ತಿತ್ತು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

 

Related Articles

error: Content is protected !!