176
ಗುವಾಹಟ : ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ಸಮರ್ಥಿಸಿಕೊಂಡ ಆರೋಪದಲ್ಲಿ ಅಸ್ಸಾಂನ ವಿಪಕ್ಷ ಎಐಯುಡಿಎಫ್ ಶಾಸಕ ಅಮಿನುಲ್ಲಾ ಇಸ್ಲಾಂರನ್ನು ಬಂಧಿಸಲಾಗಿದೆ. ದೇಶದ್ರೋಹ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದು, ಶಾಸಕರು ಪಾಕಿಸ್ತಾನದ ದಾಳಿ ಸಮರ್ಥಿಸಿಕೊಳ್ಳುತ್ತಿರುವ ವಿಡಿಯೋ ನೋಡಿ, ಪೊಲೀಸರಿಗೆ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದೆ. ಅದರಂತೆ ಅವರನ್ನು ಬಂಧಿಸಲಾಗಿದೆ’ ಎಂದಿದ್ದಾರೆ. ಈ ವಿಚಾರವಾಗಿ ಎಐಯುಡಿಎಫ್ ಅಂತರವನ್ನು ಕಾಯ್ದುಕೊಂಡಿದೆ.

