Home » ದಾಳಿಯಲ್ಲಿ ಮೃತಪಟ್ಟವರಿಗೆ ಸರಕಾರಿ ಗೌರವದೊಂದಿಗೆ ಅಂತಿಮ ನಮನ
 

ದಾಳಿಯಲ್ಲಿ ಮೃತಪಟ್ಟವರಿಗೆ ಸರಕಾರಿ ಗೌರವದೊಂದಿಗೆ ಅಂತಿಮ ನಮನ

by Kundapur Xpress
Spread the love

ಬೆಂಗಳೂರು : ಕಾಶ್ಮೀರದ ಪಹಲ್ಲಾಂನಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಕನ್ನಡಿಗರಾದ ಭರತ್ ಭೂಷಣ್ ಮತ್ತು ಮಂಜುನಾಥ್ ಅವರ ಮೃತದೇಹಗಳನ್ನು ವಿಶೇಷ ವಿಮಾನದ ಮೂಲಕ ಗುರುವಾರ ರಾಜ್ಯಕ್ಕೆ ಸುರಕ್ಷಿತವಾಗಿ ತಂದು ಸಕಲ ಸರ್ಕಾರಿ ಗೌರಗಳೊಂದಿಗೆ ಅಂತ್ಯ ಸಂಸ್ಕಾರ ನೇರವೇರಿಲಾಯಿತು.

ಬೆಂಗಳೂರಿನ ಮತ್ತಿಕೆರೆ ನಿವಾಸಿಯಾದ ಭರತ್ ಭೂಷಣ್ ಅಂತ್ಯಸಂಸ್ಕಾರವನ್ನು ಹೆಬ್ಬಾಳದ ಚಿತಾಗಾರದಲ್ಲಿ ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು, ಸಾರ್ವಜನಿಕರು ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದರು. ಸರ್ಕಾರದ ಪ್ರಮುಖ ಅಧಿಕಾರಿಗಳು, ಬಂಧು ಮಿತ್ರರು ಅಂತಿಮ ದರ್ಶನ ಪಡೆದು ಮೃತರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು

3.30ಕ್ಕೆ ಆಗಮಿಸಿದ ವಿಮಾನ :

ಮೃತದೇಹಗಳನ್ನು ಹೊತ್ತು ಬುಧವಾರ ರಾತ್ರಿ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಹೊರಟಿದ್ದ ವಿಶೇಷ ವಿಮಾನವು ಗುರುವಾರ ಮುಂಜಾನೆ 3.30ರ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿಯಿತು. ಮೃತರ ಪತ್ನಿ, ಮಕ್ಕಳನ್ನು ಕೂಡ ಜೊತೆಯಲ್ಲೇ ಕರೆತರಲಾಯಿತು. ಅವ ರೊಂದಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಇದೇ ವಿಮಾ ನದಲ್ಲಿ ಆಗಮಿಸಿದರು. ಟ್ರಕ್ ಟರ್ಮಿನಲ್ ಗೆ ಬಂದಿಳಿದ ವಿಮಾಣದಲ್ಲಿದ್ದ ಮೃತದೇ ಹಗಳನ್ನು ಸಚಿವರು ಶಿಷ್ಟಾಚಾರ ಅನುಸಾರ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಿದರು. ಈ ವೇಳೆ ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಹಾಜ ರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಕುಟುಂಬದವರ ಆಕ್ರಂದನದ ಕಟ್ಟೆ ಒಡೆದಿತ್ತು.

ಮಂಜುನಾಥ್ ಅವರಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಪೊಲೀಸ್‌ ಭದ್ರತೆ ಯಲ್ಲಿ ತುಮಕೂರು, ಚಿತ್ರದುರ್ಗ ಮಾರ್ಗ ವಾಗಿ ಶಿವಮೊಗ್ಗ ಕಳುಹಿಸಲಾಯಿತು.

 

Related Articles

error: Content is protected !!