ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆದಿಯಾಗಿ ಗಣ್ಯರು ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಥಳ ‘ಸದೈವ್ ಅಟಲ್’ ಗೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು
ಉಪರಾಷ್ಟ್ರಪತಿ ಜನದೀಪ್ ಧನಕರ್ ಸ್ಪೀಕರ್ ಓಂ ಬಿರ್ಲಾ ಜೊತೆ, ಕೇಂದ್ರ ಸಚಿವ, ಎಚ್’ ಡಿ.ಕುಮಾರಸ್ವಾಮಿ, ಆಂಧ್ರ ಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಇತರೆ ಗಣ್ಯರು ಇದ್ದರು.
ಮತ್ತೊಂದೆಡೆ ಹಳೆ ಸಂಸತ್ ಭವನದಲ್ಲಿ ವಾಜಪೇಯಿ ಭಾವಚಿತ್ರಕ್ಕೆ ಸ್ಪೀಕರ್ ಓಂಬಿರ್ಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರು ಪುಷ್ಪನಮನ ಸಲ್ಲಿಸಿದರು.