Home » ಅಯೋಧ್ಯಾ : ದುರ್ಗಾ ಮಂದಿರದ ಶಿಖರಕ್ಕೆ ಕಲಶ
 

ಅಯೋಧ್ಯಾ : ದುರ್ಗಾ ಮಂದಿರದ ಶಿಖರಕ್ಕೆ ಕಲಶ

by Kundapur Xpress
Spread the love

ಅಯೋಧ್ಯೆ : ಶ್ರೀರಾಮ ಜನ್ಮಭೂಮಿ ಸಂಕೀರ್ಣದಲ್ಲಿ ರಾಮ ಮಂದಿರ ನಿರ್ಮಾಣವೂ ಸೇರಿ ಉಳಿದ ಮಂದಿರ, ಗುಡಿಗಳ ಕಾಮಗಾರಿ ಭರದಿಂದ ಸಾಗಿದ್ದು, ಬುಧವಾರ ದುರ್ಗಾ ಮಂದಿರದ ಶಿಖರದ ಮೇಲೆ ಕಲಶ ಸ್ಥಾಪನೆ ಪೂರ್ಣಗೊಂಡಿದೆ. ಜನ್ಮಭೂಮಿ ಸಂಕೀರ್ಣದಲ್ಲಿ ರಾಮ ಮಂದಿರ ಮಾತ್ರವಲ್ಲದೇ ಇನ್ನೂ ಅನೇಕ ಮಂದಿರಗಳನ್ನು ನಿರ್ಮಿಸಲಾಗುತ್ತಿದೆ. ರಾಮ ಮಂದಿರದ ಸುತ್ತಲಿನ ಪಾರ್ಕೋಟ (ಸುತ್ತುಪೌಳಿ)ದಲ್ಲಿ ಆರು ದೇವ-ದೇವತೆಗಳಿಗೆ ಪುಟ್ಟ ಮಂದಿರಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಪಾರ್ಕೋಟದ ವಾಯವ್ಯ ಮೂಲೆಯಲ್ಲಿ ನಿರ್ಮಿಸಲಾದ ಶ್ರೀ ದುರ್ಗಾ ಮಂದಿರದ ಶಿಖರ ಮೇಲೆ ಕಲಶ ಸ್ಥಾಪಿಸಲಾಗಿದೆ.

ಪ್ರಯಾಣಿಕರ ಸೌಲಭ್ಯ ಕೇಂದ್ರ :

ಭಕ್ತರಅನುಕೂಲ ಗಮನದಲ್ಲಿಟ್ಟುಕೊಂಡು, 10 ಎಕರೆ ಪ್ರದೇಶದಲ್ಲಿ ಆಧುನಿಕ ಪ್ರಯಾಣಿಕ ಸೌಲಭ್ಯ ಕೇಂದ್ರ ನಿರ್ಮಿಸಲಾಗುತ್ತಿದೆ. ಶೂ-ಚಪ್ಪಲಿಗಳನ್ನಿಡಲು ಅದರಲ್ಲಿ ದೊಡ್ಡ ಶೂ ರ್ಯಾಕ್ ಮಾಡಲಾಗುತ್ತದೆ. ಇದಲ್ಲದೆ, ಸಂದರ್ಶಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ತಮ್ಮ ವಸ್ತುಗಳನ್ನು ಇಡಲು ಸುಮಾರು 62 ಕೌಂಟರ್‌ಗಳನ್ನು ನಿರ್ಮಿಸಲಾಗುವುದು 

 

Related Articles

error: Content is protected !!