Home ರಾಷ್ಟ್ರೀಯ ಸುದ್ದಿಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್‌ ಮುಂದಿನ ವಾರ ಉಷಾ ಜೊತೆ ಭಾರತಕ್ಕೆ

ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್‌ ಮುಂದಿನ ವಾರ ಉಷಾ ಜೊತೆ ಭಾರತಕ್ಕೆ

by Kundapur Xpress

ವಾಷಿಂಗ್ಟನ್ : ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಪತ್ನಿ ಭಾರತ ಮೂಲದ ಉಷಾ ವ್ಯಾನ್ಸ್ ದಂಪತಿ ಏ.21 ರಿಂದ 24ರ ವರೆಗೆ ಭಾರತ ಪ್ರವಾಸ ಕೈಗೊ ಳ್ಳಲಿದ್ದಾರೆ. ಜೆ.ಡಿ. ವ್ಯಾನ್ಸ್ ದಂಪತಿ ಭಾರತ ಭೇಟಿ ವೇಳೆ ನವದೆಹಲಿ, ಜೈಪುರ ಮತ್ತು ಆಗ್ರಾಗೆ ಭೇಟಿ ನೀಡಲಿದ್ದಾರೆ.

ಇನ್ನು ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಅವರ ಕಚೇರಿ ಮಾಹಿತಿ ನೀಡಿದೆ. ಭಾರತಕ್ಕೆ ಬರುವ ಮೊದಲು ಇಟಲಿಗೆ ಭೇಟಿ ನೀಡಲಿರುವ ವ್ಯಾನ್ಸ್, ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ಅವರನ್ನು ಭೇಟಿ ಮಾಡಲಿದ್ದಾರೆ.

Related Articles