Home » ಚಲಿಸುವ ರೈಲಿನಲ್ಲಿ ಎಟಿಎಂ : ಪಂಚವಟಿ ಎಕ್ಸ್‌ಪ್ರೆಸ್
 

ಚಲಿಸುವ ರೈಲಿನಲ್ಲಿ ಎಟಿಎಂ : ಪಂಚವಟಿ ಎಕ್ಸ್‌ಪ್ರೆಸ್

by Kundapur Xpress
Spread the love

ಹೊಸದಿಲ್ಲಿ : ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಮನ್ಮಾಡ್-ಮುಂಬೈ ಸಿಎಸ್‌ಎಂಟಿ ಪಂಚವಟಿ ಎಕ್ಸ್‌ಪ್ರೆಸ್ ನಲ್ಲಿ ಎಟಿಎಂ ಸೌಲಭ್ಯ ಪ್ರಾರಂಭಿಸಿದೆ. ನಾನ್-ಫೇರ್ ರೆವೆನ್ಯೂ (ಎನ್‌ಎಫ್‌ಆರ್) ಯೋಜನೆಯಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಸಹಯೋಗದೊಂದಿಗೆ ರೈಲ್ವೆ ಈ ಯೋಜನೆ ಕೈಗೊಂಡಿದೆ

ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ರೈಲು ಪ್ರಯಾಣದೊಂದಿಗೆ ಸಂಯೋಜಿಸುವಲ್ಲಿ ಮಹತ್ವದ ಬೆಳವಣಿಗೆ ಸೂಚಿಸುತ್ತದೆ. ಮನ್ಮಾಡ್-ಮುಂಬೈ ಪಂಚವಟಿ ಎಕ್ಸ್ ಪ್ರೆಸ್, ಎರಡು ನಗರಗಳನ್ನು ಸಂಪರ್ಕಿಸುವ ಜನಪ್ರಿಯ ಇಂಟರ್ಸಿಟಿ ರೈಲು. ಈ ನವೀನ ಯೋಜನೆ ವಕೀಲರು, ಉದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿ ನಿತ್ಯ ಸಂಚರಿಸುವ ನೂರಾರು ಪ್ರಯಾಣಿಕರ ಅಗತ್ಯಗಳನ್ನು ಪೂರೈಸುತ್ತದೆ. ಅವರ ಪ್ರಯಾಣದ ಸಮಯದಲ್ಲಿ ಅನುಕೂಲಕರ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Related Articles

error: Content is protected !!