86
ಲಖನೌ : ಗಲ್ವಾನ್ ವ್ಯಾಲಿ ಗಲಾಟೆ ವಿಚಾರ ಮುಂದಿಟ್ಟುಕೊಂಡು ಭಾರತೀಯ ಯೋಧರಿಗೆ ಅವಮಾನ ಮಾಡಿದ ಆರೋಪದ ಮೇರೆಗೆ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಕೇಸಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಜಾಮೀನು ಸಿಕ್ಕಿದೆ.
ಈ ಸಂಬಂಧ ಲಖನೌ ಕೋರ್ಟ್‌ಗೆ ಖುದ್ದು ವಕೀಲರ ಜತೆಗೆ ಹಾಜರಾದ ರಾಹುಲ್ ಅವರು ಜಾಮೀನು ಪಡೆದುಕೊಂಡಿದ್ದಾರೆ. ‘ನಾವು ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದು ಏಕೆ ಎಂಬುದಾಗಿ ಜನ ಪ್ರಶ್ನಿಸುತ್ತಾರೆ. ಆದರೆ, ಚೀನಾ ಯೋಧರು ನಮ್ಮ ಯೋಧರನ್ನು ಹೊಡೆದಿದ್ದನ್ನು ಯಾರೂ ಪ್ರಶ್ನಿಸಲ್ಲ ಎಂದಿದ್ದರು. ಇದು ಯೋಧರಿಗೆ ಮಾಡಿದ ಅವಮಾನ ಎಂಬ ಕೇಸು ದಾಖಲಾಗಿತ್ತು

