Home » ಭಾರತದ ಚುನಾವಣಾ ವ್ಯವಸ್ಥೆ : ಟ್ರಂಪ್ ಮೆಚ್ಚುಗೆ
 

ಭಾರತದ ಚುನಾವಣಾ ವ್ಯವಸ್ಥೆ : ಟ್ರಂಪ್ ಮೆಚ್ಚುಗೆ

by Kundapur Xpress
Spread the love

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ಪ್ರಶಂಸಿಸಿದ್ದಾರೆ. ಭಾರತದ ಎಲೆಕ್ಷನ್‌ನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದ್ದರೆ, ಅಮೆರಿಕದಲ್ಲಿ ಇದು ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಭಾರತದ ಚುನಾವಣಾ ಆಯೋಗದ ಕ್ರಮವನ್ನು ಅವರು ಮೆಚ್ಚಿದ್ದಾರೆ.

ಅಮೆರಿಕ ಚುನಾವಣಾ ಸುಧಾರಣಾ ಕ್ರಮಗಳಿಗೆ ಸಹಿ ಹಾಕಿ ಮಾತನಾಡಿದ ಟ್ರಂಪ್  ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳು ಬಯೋಮೆಟ್ರಿಕ್ ಮಾಹಿತಿಯನ್ನು ಮತದಾರರ ಗುರುತಿನೊಂದಿಗೆ ಜೋಡಿಸಿದ್ದಾರೆ. ಆದರೆ ಅಮೆರಿಕ ಇನ್ನೂ ಪೌರತ್ವದ ಸ್ವಯಂ ಧೃಡೀಕರಣದ ಮೇಲೆ ಅವಲಂಬಿತವಾಗಿದೆ. ಈ ಮೂಲಕ ಮುಂದುವರೆದ ಹಾಗೂ ಮುಂದುವರೆಯುತ್ತಿರುವ ದೇಶಗಳೂ ಅಳವಡಿಸಿಕೊಳ್ಳುತ್ತಿರುವ ರಕ್ಷಣಾ ಕ್ರಮ ಗಳನ್ನು ಜಾರಿಗೊಳಿಸುವಲ್ಲಿ ಸೋತಿದೆ ಎಂದರು. ಅಮೆರಿಕದಲ್ಲಿ ಈಗಲೂ ಹಳೆಯ ಕಾಲದ ಬ್ಯಾಲೆಟ್ ಬಾಕ್ಸ್ ಮತ ವ್ಯವಸ್ಥೆ ಇದ್ದರೆ ಭಾರತದಲ್ಲಿ ಮತಯಂತ್ರ ಇದೆ ಎಂಬುದೂ ಇಲ್ಲಿ ಗಮನಾರ್ಹ ವಿಷಯವಾಗಿದೆ

 

Related Articles

error: Content is protected !!