ಹೊಸದಿಲ್ಲಿ : ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದೊಂದಿಗೆ, ಅಲ್ಲಿನ ಜನರ ಜನಾದೇಶದ ಅಭಿವ್ಯಕ್ತಿಯನ್ನು ಭಾರತ ಆಚರಿಸುತ್ತದೆ. ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಬಯಸುತ್ತದೆ ಎಂದು ಭಾರತ ಗುರುವಾರ ಹೇಳಿದೆ.
ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಗೆಲ್ಲುವ ಮೂಲಕ ರಾಜಕೀಯ ಪುನರಾಗಮನವನ್ನು ದಾಖಲಿಸಿದ ಬೆನ್ನಲ್ಲೆ, ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ದೂರವಾಣಿ ಸಂಭಾಷಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಟ್ರಂಪ್ ಅವರ ಅದ್ಭುತ ಗೆಲುವು ಅವರ ನಾಯಕತ್ವ ಮತ್ತು ದೃಷ್ಟಿಕೋನದಲ್ಲಿ ಅಮೆರಿಕದ ಜನರ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ರಿಪಬ್ಲಿಕನ್ ಪಕ್ಷದ ಯಶಸ್ಸಿಗಾಗಿಯೂ ಟ್ರಂಪ್ ಅವರನ್ನು ಮೋದಿ ಅಭಿನಂದಿಸಿದ್ದಾರೆ. ಎಂದು ಎಂಇಎ ತಿಳಿಸಿದೆ.