ನವದೆಹಲಿ : ಆಹಾರ ವಸ್ತುಗಳ ಬೆಲೆ ಮತ್ತೆ ಗಗನ ಮುಖಿಯಾದ ಬೆನ್ನಲ್ಲೇ ಭಾರತ್ ಬ್ರಾಂಡ್’ ಅಡಿಯಲ್ಲಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಅಕ್ಕಿ ಹಾಗೂ ಗೋಧಿ ಹಿಟ್ಟಿನ ಮಾರಾಟದ 2ನೇ ಹಂತಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಚಾಲನೆ ನೀಡಿದರು
ಈ ಯೋಜನೆಯಡಿ ಗೋಧಿ ಹಿಟ್ಟು ಪ್ರತಿ ಕೇಜಿಗೆ 30 ರು., ಅಕ್ಕಿ 34 ರು. ನಿಗದಿಪಡಿಸಲಾಗಿದೆ. ಎನ್ ಸಿಸಿಎಫ್, ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಹಾಗೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ 5 ಕೇಜಿ ಗೋಧಿ ಮತ್ತು 10 ಕೇಜಿ ಅಕ್ಕಿ ಚೀಲಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಅಲ್ಲದೆ, ಕೆಲವು ಮಾಲ್‌ಗಳಲ್ಲಿ ಇವು ಲಭ್ಯ ಇರಲಿವೆ. ಜತೆಗೆ ಮಹಾನಗರಗಳಲ್ಲಿ ಚಿಕ್ಕ ಗೂಡ್ಸ್ ಆಟೋಗಳ ಮೂಲಕ ಅಲ್ಲಲ್ಲಿ ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.