ಜಮುಯ್ (ಬಿಹಾರ) : ದೇಶದ ಸ್ವಾತಂತ್ರ್ಯ ಅಂದೋಲನಕ್ಕೆ ಬುಡಕಟ್ಟು ನಾಯಕರ ಅಥವಾ ವನವಾಸಿಗಳ ಕೊಡುಗೆ ಅನನ್ಯವಾದುದು. ಆದರೆ ದೇಶವನ್ನಾಳಿದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ವನವಾಸಿಗಳ ಈ ಮಹತ್ತರ ಕೊಡುಗೆಗಳನ್ನು ತೀರಾ ಮರೆಮಾಚಲು ಯತ್ನಿಸಿದ್ದವು. ಸ್ವಾತಂತ್ರ್ಯ ಹೋರಾಟದ ಕೀರ್ತಿ ಒಂದು ಪಕ್ಷ ಮತ್ತು ಒಂದು ಕುಟುಂಬಕ್ಕೆ ಸೀಮಿತವಾಗಬೇಕು ಎಂಬುದು ಕಾಂಗ್ರೆಸ್ಸಿಗರ ಕುತಂತ್ರವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ತರಾಟೆಗೆತ್ತಿಕೊಂಡರು
ದಂತಕಥೆಯಾದ ವನವಾಸಿ ನಾಯಕ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನೋತ್ಸವವನ್ನು ಶುಕ್ರವಾರ ಬಿಹಾರದ ಜಮುಯ್ ಜಿಲ್ಲೆಯಲ್ಲಿ ಆಚರಿಸಲಾಗಿದ್ದು ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ವಿಪಕ್ಷಗಳ ಅಥವಾ ನೆಹರೂ-ಗಾಂಧಿ ಕುಟುಂಬದ ಹೆಸರಲ್ಲೇಖಿಸದೆ ಕಾಂಗ್ರೆಸಿನ ವಂಶವಾದಿ ರಾಜಕೀಯ ಸ್ವಾರ್ಥ ದೇಶಕ್ಕೆ ಮಾಡಿರುವ ಹಾನಿಯನ್ನು ಬೊಟ್ಟು ಮಾಡಿದರು. ಸುಮಾರು 6 ಸಾವಿರ ಕೋಟಿ ರೂ. ಮೊತ್ತದ ವನವಾಸಿ ಕಲ್ಯಾಣ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭ ಲೋಕಾರ್ಪಣೆ ಮಾಡಿದರು