ನವದೆಹಲಿ : ಇಂದು ಅಕ್ಟೋಬರ್22 ಮತ್ತು 23 ರಂದು ರಷ್ಯಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ರಷ್ಯಾ – ಉಕ್ರೇನ್ ಯುದ್ಧ ಹಾಗೂ ಇಸ್ರೇಲ್-ಹಮಾಸ್-ಹಿಜ್ಜುಲ್ಲಾ ಯುದ್ಧದ ವೇಳೆಯೇ ಶೃಂಗ ನಡೆಯಲಿರುವ ಕಾರಣ ಯುದ್ಧ ತಣಿಸುವ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದ. ಆಫ್ರಿಕ ದೇಶಗಳ ಒಕ್ಕೂಟವೇ ‘ಬ್ರಿಕ್ಸ್’ ಆಗಿದೆ. ಇದರ ಜತೆಗೆ ಈಜಿಪ್ಟ್, ಇಥಿಯೊ ಪಿಯಾ, ಇರಾನ್, ಸೌದಿ ಅರೇಬಿಯಾ ಹಾಗೂ ಯುಎಇ ಕೂಡ ಸೇರಿ ಕೊಂಡಿದ್ದು, ಆ ದೇಶಗಳೂ ಭಾಗಿ ಆಗಲಿವೆ. ಶೃಂಗಸಭೆಯಲ್ಲಿ ಆರ್ಥಿಕ ಅಭಿವೃದ್ಧಿ, ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಹವಾಮಾನ ಬದಲಾವಣೆ ಬಗ್ಗೆ ಚರ್ಚೆ ನಡೆಯಲಿವೆ ಎಂದು ತಿಳಿದುಬಂದಿದೆ