ಆಜಂಗಢ : ಅಧಿಕಾರಕ್ಕೆ ಬಂದರೆ ಸಿಎಎ (ಪೌರತ್ನ ತಿದ್ದುಪಡಿ ಕಾಯ್ದೆ) ರದ್ದು ಮಾಡುವುದಾಗಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಹೇಳುತ್ತಿವೆ. ಆದರೆ ಅದನ್ನು ವಾಪಸ್ ಪಡೆಯುವಂತಹ ಮಗ ಈ ದೇಶದಲ್ಲಿ ಹುಟ್ಟಿದ್ದಾನಾ? ಎಂದು ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ.
ಉತ್ತರಪ್ರದೇಶದ ಲಾಲ್ ಗಂಜ್ ನಲ್ಲಿ ಚುನಾವಣಾ ಪ್ರಚಾರರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ಬಗ್ಗೆ ಸಮಾಜವಾದಿ ಪಕ್ಷ. ಕಾಂಗ್ರೆಸ್ ಸುಳ್ಳು ಹಬ್ಬಿಸುತ್ತಿವೆ. ದೇಶವನ್ನು ದಹಿಸಲು ಆ ಎರಡೂ ಪಕ್ಷಗಳೂ ಶಕ್ತಿ ಮೀರಿ ಪ್ರಯತ್ನಿಸಿವೆ. ಮೋದಿ ಸರ್ಕಾರ ಸಿಎಎ ಜಾರಿಗೆ ತಂದಿದೆ. ಮುಂದೊಂದು ದಿನ ಸಿಎಎ ತೆಗೆದು ಹಾಕುತ್ತೇವೆ ಎಂದು ಇಂಡಿಕೂಟದ ನಾಯಕರು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಅಂಥಾ ವ್ಯಕ್ತಿ ಈರೆಗೂ ಜನಿಸಿದ್ದಾನಾ? ಎಂದು ಪ್ರಶ್ನಿಸಿದರು.