ಹೊಸದಿಲ್ಲಿ : ರಾಜಸ್ಥಾನದ ಅಜೇರ್ ದರ್ಗಾದ ಖಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಹಿನ್ನೆಲೆಯಲ್ಲಿ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಚಾದರ್ ಅನ್ನು ಅರ್ಪಿಸಿದ್ದಾರೆ. ಪ್ರಧಾನಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರು ಚಾದರ್ ಅನ್ನು ಅಜೇರ್ ಶರೀಫ್ ದರ್ಗಾಕ್ಕೆ ಸಮರ್ಪಿಸಲಿದ್ದಾರೆ. 13ನೇ ಶತಮಾನದ ಸೂಫಿ ಸಂತ ಸ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಸಮಯದಲ್ಲಿ ಈ ಚಾದರ್ ಅನ್ನು ಅಜೇರ್ ಶರೀಫ್ ದರ್ಗಾದಲ್ಲಿ ಅರ್ಪಿಸಲಾಗುವುದು.