ನವದೆಹಲಿ : ಲೋಕಸಭೆ ಚುನಾವಣೆ ಮತ ಎಣಿಕೆಗಳು ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ದಿಗ್ವಿಜಯ ಸಾಧಿಸಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಫೋನ್ ಮಾಡಿ ಎನ್‌ಡಿಎಗೆ ಸಂಚಾಲಕ ಪಟ್ಟದ ಆಫರ್ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಲು ವಿಫಲವಾಗಿದೆ. ಹೀಗಾಗಿ ಮಿತ್ರ ಪಕ್ಷಗಳು ಈಗ ಬಿಜೆಪಿಗೆ ಅನಿವಾರ್ಯವಾಗಿವೆ. ಹೀಗಾಗಿ ಮಿತ್ರ ಪಕ್ಷಗಳನ್ನು ಚೆನ್ನಾಗಿ ನೋಡಿಕೊಳ್ಳುವ ಉದ್ದೇಶದಿಂದ ನಾಯ್ಡುಗೆ ಸಂಚಾಲಕ ಹುದ್ದೆ ಆಫರ್ ನೀಡಲಾಗಿದೆ.
ಗೆಲುವಿನ ನಂತರ ಬಿಜೆಪಿ ನಂ.2 ನಾಯಕ ಅಮಿತ್ ಶಾ ಕೂಡ ನಾಯ್ಡುಗೆ ಕರೆ ಮಾಡಿ ಈ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಮೋದಿ ಅವರು ಜ.9ರಂದು ನಡೆಯಲಿರುವ ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ