Home » ಮೋದಿ ನಾಯಕತ್ವದಲ್ಲಿ ಭಾರತ ನಂ. 1 : ನಾಯ್ಡು
 

ಮೋದಿ ನಾಯಕತ್ವದಲ್ಲಿ ಭಾರತ ನಂ. 1 : ನಾಯ್ಡು

by Kundapur Xpress
Spread the love

ಅಮರಾವತಿ : ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ 2047ರ ವೇಳೆಗೆ ವಿಶ್ವದ ನಂಬರ್ ಒನ್ ಅಥವಾ ಎರಡನೇ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ಶ್ಲಾಘಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ರಾಜ್ಯದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಅತ್ಯಗತ್ಯ ಎಂದು ಪ್ರತಿಪಾದಿಸಿದರು

ಶನಿವಾರ ಕಡಪ ಜಿಲ್ಲೆಯ ಮೈದುಕೂರಿನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, 2014 ಮತ್ತು 2019ರ ನಡುವೆ ಎನ್‌ಡಿಎ ಜತೆಗೂ ಕೆಲಸ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ 2047ರ ವೇಳೆಗೆ ನಂಬರ್ ಒನ್ ಅಥವಾ ಎರಡನೇ ಆರ್ಥಿಕತೆಯಾಗಲಿದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಆ ಮೂಲಕ ತೆಲುಗು ಜನರು ಜಾಗತಿಕವಾಗಿ ನಂಬರ್ ಒನ್ ಸ್ಥಾನದಲ್ಲಿರುವುದನ್ನು ನೋಡುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಎನ್‌ಡಿಎ ಗೆದ್ದಿರುವ ಒಟ್ಟು 25 ಲೋಕಸಭಾ ಸ್ಥಾನಗಳಲ್ಲಿ 21 ಸ್ಥಾನಗಳು ಸಂಜೀವಿನಿಯಂತೆ ಮಾರ್ಪಟ್ಟಿವೆ ಎಂದು ಹೇಳಿದರು. ಆರ್ಥಿಕವಾಗಿ ವೆಂಟಿಲೇಟರ್‌ನಲ್ಲಿರುವ ಆಂಧ್ರಪ್ರದೇಶವು ಕೇಂದ್ರ ಸರ್ಕಾರವು ಪೂರೈಸುತ್ತಿರುವ ಆಮ್ಲಜನಕದ ಮೇಲೆ ಬದುಕುಳಿದಿರುವುದಾಗಿ ಹೇಳಿದರು. ಒಂದು ಕೋಟಿ ಸದಸ್ಯರನ್ನು ಹೊಂದಿರುವ ತೆಲುಗು ದೇಶಂ ಪಕ್ಷವು ಪ್ರಾದೇಶಿಕ ಸಂಘಟನೆಯಾಗಿದ್ದರೂ, ಅದು ಯಾವಾಗಲೂ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಕೆಲಸ ಮಾಡಿದೆ ಎಂದು ಅವರು ಹೇಳಿದರು.

 

Related Articles

error: Content is protected !!