Home » ಟ್ರಂಪ್‌ ಕರೆಗೆ ಪ್ರತಿಕ್ರಿಯಿಸಲು ಮೋದಿ ನಕಾರ
 

ಟ್ರಂಪ್‌ ಕರೆಗೆ ಪ್ರತಿಕ್ರಿಯಿಸಲು ಮೋದಿ ನಕಾರ

by Kundapur Xpress
Spread the love

ನವದೆಹಲಿ : ಒಂದು ಕಡೆ ಭಾರತದ ಮೇಲೆ ತೆರಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮತ್ತೊಂದು ಕಡೆ ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಸಂಪರ್ಕಿಸುವ ಪ್ರಯತ್ನವನ್ನೂ ನಡೆಸಿದ್ದರು.

‘ಕಳೆದ ಕೆಲ ವಾರಗಳಿಂದ ಟ್ರಂಪ್ ಮೋದಿಗೆ ನಾಲ್ಕು ಬಾರಿ ಕರೆ  ಮಾಡಿದ್ದರು. ಆದರೆ, ಪ್ರತಿ ಬಾರಿಯೂ ಟ್ರಂಪ್ ಅವರ ಕರೆ ಸ್ವೀಕರಿಸಲು ಮೋದಿ ನಿರಾಕರಿಸಿದರು ಎಂದು ಜರ್ಮನಿಯ ಪ್ರತಿಷ್ಠಿತ ಪತ್ರಿಕೆಯೊಂದು ಸ್ಪೋಟಕ ವರದಿಯನ್ನು ಪ್ರಕಟಿಸಿದೆ. ಜರ್ಮನಿಯ ‘ಫ್ರಾಂಕ್‌ಫರ್ಟರ್ ಆಲ್ಗೊಹಿನ್ಸ್ ಜಿಂತುಂಕ’ ಪತ್ರಿಕೆ ಈ ಕುರಿತು ವರದಿ ಮಾಡಿದೆ.

ಮೋದಿ ಅವರು ಟ್ರಂಪ್‌ರ ಮಾಧ್ಯಮ ಪ್ರಚಾರ ಕಾರ್ಯತಂತ್ರದ ಭಾಗವಾಗಲು ಬಯಸುತ್ತಿಲ್ಲ. ಅದೇ ರೀತಿ ದೇಶದ ಕೃಷಿ ಕ್ಷೇತ್ರವನ್ನು ಅಮೆರಿಕಕ್ಕೆ ತೆರೆಯುವ ವಿಚಾರದಲ್ಲಿ ಒತ್ತಡಕ್ಕೆ ಮಣಿಯಲೂ ಸಿದ್ಧವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವರದಿ ಕುರಿತು ಭಾರತದ ಅಧಿಕಾರಿಗಳು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ

 

Related Articles

error: Content is protected !!