ಮೂಲ್ಕಿ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಅಮಾನುಷವಾಗಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ದೇಶದ ಗಡಿಭಾಗದಲ್ಲಿ ಉಂಟಾಗಿರುವ ಸೂಕ್ಷ್ಮತೆಯ ಹಿತದೃಷ್ಟಿಯ ಬಗ್ಗೆ ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ವಿಶ್ಲೇಷಣೆ ನಡೆಸಿದ್ದಾರೆ.
ದೇಶವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿ ಗ್ರಹಗತಿಗಳ ನಡೆಯಂತೆ, ಯುದ್ಧ ನಡೆಯುವ ಮುನ್ಸೂಚನೆಯ ವಾತಾವರಣ ನಿರ್ಮಾಣವಾಗಿದೆ ಎಂದು ಭವಷ್ಯ ನುಡಿದಿದ್ದಾರೆ. ಪುರಾಣ ಕಾಲದಲ್ಲಿ ಗೋಚರ ರೀತ್ಯಾ ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಮಯ, ಹಾಗೂ ರಾವಣರ ಮೇಲೆ ರಾಮರ ಯುದ್ಧ ಸಮಯ ಇವೆಲ್ಲವೂ ಕೆಲವು ಗ್ರಹಗತಿಯ ಪ್ರಭಾವದಿಂದ ನಡೆದು ವಿಜಯದ ಪತಾಕೆ ಹಾರಿಸಿದ್ದು ನಮ್ಮ ಇತಿಹಾಸ, ಅದೇ ಮಾದರಿಯಲ್ಲಿ ಶನಿ, ರಾಹು, ಯುತಿ, ಶನಿ ರವಿಯ ಮೇಲಿನ ದೃಷ್ಟಿ ನೆಟ್ಟಿದೆ. ಮೇ 19ರೊಳಗೆ ಗಡಿ ಭಾಗದಲ್ಲಿ ಮಹಾ ಬದಲಾವಣೆಯಾಗಲಿದ್ದು, ಯುದ್ಧದ ವಾತಾವರಣ ನಿರ್ಮಾಣವಾಗಿ, ಪ್ರಸ್ತುತ ವಿದ್ಯುನ್ಮಾನ, ತಾರ್ಕಿಕ ಅಂತ್ಯ ಕಾಣಲಿದೆ. ಈ ಸಂದರ್ಭ ಭವ್ಯ ಭಾರತವು ಬಲಿಷ್ಠ ದೇಶವಾಗಿ ವಿಶ್ವವೇ ಗಮನ ಸೆಳೆಯಲಿದೆ ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ.

