Home » ಭಾರತದ ವಸ್ತುಗಳಿಗೆ ಚೀನಾ ಸ್ವಾಗತ
 

ಭಾರತದ ವಸ್ತುಗಳಿಗೆ ಚೀನಾ ಸ್ವಾಗತ

by Kundapur Xpress
Spread the love

ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಅವರ ಟ್ಯಾರಿಫ್‌ ಹೇಳಿಕೆ ಬಳಿಕ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಹೊಸ ತಿರುವನ್ನೇ ಪಡೆದಿದ್ದು, ಭಾರತದ ವಸ್ತುಗಳನ್ನು ಚೀನಾ ಮಾರುಕಟ್ಟೆ ಸ್ವಾಗತಿಸಲಿದೆ ಎಂದು ಹೇಳಿದೆ.

‘ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾರತದಲ್ಲಿನ ಚೀನಾ ರಾಯಭಾರಿ ಕ್ಷು ಫಿಯಾಂಗ್, ಉಭಯ ದೇಶಗಳ ಸಹಕಾರ ಸಂಬಂಧಗಳ ಸುಧಾರಣೆಗಾಗಿ ನಾವಿಬ್ಬರೂ ಜತೆಗೂಡಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಸದ್ಯ ಇಡೀ ಜಗತ್ತು ತಲ್ಲಣಗಳಿಂದ ಕೂಡಿದೆ. ಜಾಗತಿಕ ಮಹಾ ಸಮರ 2ರ ಬಳಿಕ ಇಂಥ ಘಟನೆಗಳಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಈ ತಲ್ಲಣಗಳು ಮತ್ತು ಬದಲಾವಣೆಯ ಹೊತ್ತಲ್ಲಿ, ಭಾರತ ಮತ್ತು ಚೀನಾ ದೇಶಗಳು ಸಂಬಂಧಗಳ ವಿಚಾರದಲ್ಲಿ ಮುಂದಡಿ ಇಟ್ಟಿವೆ. ಈ ಸಹಕಾರ ಹೆಜ್ಜೆಯು ಉಭಯ ದೇಶಗಳಿಗೂ ಅನುಕೂಲವುಂಟುಮಾಡಲಿದೆ ಎಂದು ಹೇಳಿದರು.

ಹಾಗೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅವರು ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದನ್ನೂ ಅವರು ಟೀಕಿಸಿದರು. ಈ ವಿಚಾರದಲ್ಲಿ ನಾವು ಭಾರತದ ಜತೆ ಗಟ್ಟಿಯಾಗಿ ನಿಲ್ಲಲಿದ್ದೇವೆ ಎಂದರು. ವ್ಯಾಪಾರ ನಿರ್ಬಂಧಗಳ ಸಮಯದಲ್ಲಿ ನಾವು ಭಾರತದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.

ಜಗತ್ತಿನ ಭೂಪಟದಲ್ಲಿ ಉಭಯ ದೇಶಗಳು ಬೃಹದಾಕಾರವಾಗಿ ನಿಂತಿವೆ. ಗಾತ್ರ, ಒಗ್ಗಟ್ಟು ಮತ್ತು ಸಹಕಾರವು ಅಭಿವೃದ್ಧಿಯ ಮಾರ್ಗಗಳಾಗಿವೆ. ಭಾರತ-ಚೀನಾದ ಸ್ನೇಹ ಇಡೀ ಏಷ್ಯಾಗೇ ಸಹಾಯವಾಗಲಿದೆ. ಏಷ್ಯಾದ ಆರ್ಥಿಕ ಪ್ರಗತಿಗೆ ನಾವು ಡಬಲ್ ಎಂಜಿನ್‌ಗಳಾಗಿದ್ದೇವೆ ಎಂದು ಹೇಳಿದರು.

 

Related Articles

error: Content is protected !!