Home » ಉಗ್ರ ರಾಣಾ ಮನವಿ ತಿರಸ್ಕರಿಸಿದ ಅಮೆರಿಕ
 

ಉಗ್ರ ರಾಣಾ ಮನವಿ ತಿರಸ್ಕರಿಸಿದ ಅಮೆರಿಕ

by Kundapur Xpress
Spread the love

ನವದೆಹಲಿ :  26/11 ಮುಂಬೈ ಸ್ಪೋಟದ ಆರೋಪಿ ತಹವೂ‌ರ್ ರಾಣಾ ತನ್ನನ್ನು ಭಾರತಕ್ಕೆ ಹಸ್ತಾಂತರಿಸದಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಡೇವಿಡ್ ಹೆಡ್ಲಿಯೊಂದಿಗೆ ಸಂಬಂಧ ಹೊಂದಿರುವ ರಾಣಾ ಪ್ರಸ್ತುತ ಲಾಸ್ ಏಂಜಲೀಸ್ ಜೈಲಿನಲ್ಲಿದ್ದಾನೆ.

ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾ, ಅಮೆರಿಕದ ಸುಪ್ರೀಂ ಕೋರ್ಟ್‌ ಅಸೋಸಿಯೇಟ್ ಜಸ್ಟೀಸ್ ಮತ್ತು ಒಂಬತ್ತನೇ ಸರ್ಕ್ಯೂಟ್‌ನ ಸರ್ಕ್ಯೂಟ್ ಜಸ್ಟೀಸ್ ಅವರಿಗೆ ತನ್ನ ಹಸ್ತಾಂತರ ತಡೆಗಾಗಿ ತುರ್ತು ಅರ್ಜಿ ಸಲ್ಲಿಸಿದ್ದರು. ಭಾರತಕ್ಕೆ ಹಸ್ತಾಂತರಿಸುವುದು ಯುಎಸ್ ಕಾನೂನು ಮತ್ತು ಚಿತ್ರಹಿಂಸೆಯ ವಿರುದ್ಧದ ವಿಶ್ವಸಂಸ್ಥೆಯ ನಿಯಮ ಉಲ್ಲಂಘಿಸಿದೆ ಎಂದು ತಮ್ಮ ಮನವಿಯಲ್ಲಿ ವಾದಿಸಿದ್ದಾರೆ.

ಭಾರತಕ್ಕೆ ಹಸ್ತಾಂತರಿಸಿದರೆ, ಅರ್ಜಿದಾರರು ಚಿತ್ರಹಿಂಸೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ರಾಣಾ ಪರ ವಕೀಲರು ವಾದಿಸಿದ್ದರು. ಮುಂಬೈ ದಾಳಿಯ ಆರೋಪಿಗಳಲ್ಲಿ ಒಬ್ಬನಾದ ರಾಣಾ, ಪಾಕಿಸ್ತಾನಿ ಮೂಲದ ಮುಸ್ಲಿಮ್ ಆಗಿರುವುದರಿಂದ ತನ್ನ ಅರ್ಜಿದಾರರು ತೀವ್ರ ಅಪಾಯವನ್ನು ಎದುರಿಸುತ್ತಿರುವುದರಿಂದ ಈ ಪ್ರಕರಣದಲ್ಲಿ ಚಿತ್ರಹಿಂಸೆಯ ಸಾಧ್ಯತೆ ಇನ್ನೂ ಹೆಚ್ಚಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

 

Related Articles

error: Content is protected !!