86
ಧರ್ಮಶಾಲಾ : ಜನರಿಗೆ ಸೇವೆ ಸಲ್ಲಿಸುವುದಕ್ಕಾಗಿ ಇನ್ನೂ 30-40 ವರ್ಷಗಳ ಕಾಲ ಬದುಕುವುದಾಗಿ ಭರವಸೆ ವ್ಯಕ್ತಪಡಿಸಿದ ಟಿಬೆಟ್ ಅಧ್ಯಾತ್ಮ ಗುರು ದಲೈ ಲಾಮಾ, ಶನಿವಾರ ತಮ್ಮ ಉತ್ತರಾಧಿಕಾರಿಯ ಘೋಷಣೆಯ ಸುತ್ತಲಿನ ವದಂತಿಗಳಿಗೆ ಅಂತ್ಯ ಹಾಡಿದರು.
ತುಗ್ಲಾಗ್ದಾಂಗನಲ್ಲಿರುವ ಮೆಕ್ಲಿಯೋಡ್ಗಂಜ್‌ನ ದಲೈ ಲಾಮಾ ದೇವಾಲಯವಾದ ಭಾನುವಾರ ನಡೆಯಲಿರುವ ತಮ್ಮ 90ನೇ ಜನ್ಮ ವಾರ್ಷಿಕೋತ್ಸವಕ್ಕೆ ಮುಂಚಿತವಾಗಿ ನಡೆದ ದೀರ್ಘಾಯುಷ್ಯ ಪ್ರಾರ್ಥನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಅವಲೋಕಿತೇಶ್ವರನ ಆಶೀರ್ವಾದವಿದೆ. ನಾನು ಇಲ್ಲಿಯವರೆಗೆ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ನಾನು ಇನ್ನೂ 30-40 ವರ್ಷಗಳ ಕಾಲ ಬದುಕಲು ಆಶಿಸುತ್ತೇನೆ. ನಿಮ್ಮ ಪ್ರಾರ್ಥನೆಗಳು ಇಲ್ಲಿಯವರೆಗೆ ಫಲ ನೀಡಿವೆ ಎಂದು ಹೇಳಿದರು.

