Home » ದೆಹಲಿ ಸರ್ಕಾರ ರಚನೆ ಪ್ರಕ್ರಿಯೆ ಪ್ರಾರಂಭ
 

ದೆಹಲಿ ಸರ್ಕಾರ ರಚನೆ ಪ್ರಕ್ರಿಯೆ ಪ್ರಾರಂಭ

by Kundapur Xpress
Spread the love

ನವದೆಹಲಿ : 27 ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿರುವ ಬಿಜೆಪಿ ಸರ್ಕಾರ ರಚನೆ ಮತ್ತು ತನ್ನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭಾನುವಾರ ಭೇಟಿಯಾಗಿ ಹಲವು ಆಯಾಮಗಳಲ್ಲಿ ಮಾತುಕತೆ ನಡೆಸಿದ್ದಾರೆ.

ಈ ಮಾತುಕತೆ ವೇಳೆ ನೂತನ ಸರ್ಕಾರ ರಚನೆಯ ಪ್ರಕ್ರಿಯೆ, ಕಾರ್ಯಕ್ರಮದ ರೂಪು ರೇಷೆ, ನೂತನಮುಖ್ಯಮಂತ್ರಿ ಯಾರಾಗಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಅದರ ನಡು ವೆಯೇ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್ ದೇವ್ ಅವರು ಉಪರಾಜ್ಯಪಾಲ ವಿ.ಕೆ. ಸಕ್ಷೇನಾ ಅವರನ್ನು ಭೇಟಿ ಮಾಡಿ, ನೂತನ ಶಾಸಕರ ಭೇಟಿಗೆ ಸಮಯ ಕೋರಿದ್ದಾರೆ.

ಪಕ್ಷದಲ್ಲಿ ಸಿಎಂ ಪಟ್ಟಕ್ಕೆ ಹಲವರ ಹೆಸರುಗಳು ಕೇಳಿಬರುತ್ತಿದ್ದು, ಮಾಜಿ ಸಿಎಂ ಅರವಿಂದ್ ಕೇಜ್ರವಾಲ್ ಅವರಿಗೆ ಸೋಲುಣಿಸಿದ ಪರ್ವೇಶ್ ವರ್ಮಾ ಅವರ ಹೆಸರು ಮುಂಚೂ ಣಿಯಲ್ಲಿದೆ. ಜೊತೆಗೆ ಸತೀಶ್‌ ಉಪಾಧ್ಯಾಯ, ಆಶಿಷ್ ಸೂದ್, ವಿಜೇಂದ್ರ ಗುಪ್ತಾ ಮತ್ತು ಪವನ್ ಶರ್ಮಾ ಅವರ ಹೆಸರುಗಳು ಸಹ ಕೇಳಿಬರುತ್ತಿವೆ.

ಮತ್ತೊಂದೆಡೆ ಈ ಹಿಂದೆ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಆಯ್ಕೆಯಾದಂತೆ ಹೊಸ ಮುಖವನ್ನು ಪರಿಚಯಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅಥವಾ ಸಿಎಂ ಪಟ್ಟಕ್ಕೆ ಮಹಿಳೆಯರ ಹೆಸರನ್ನು ಸಹ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ರೇಖಾ ಗುಪ್ತಾ ಮತ್ತು ಶಿಖಾ ರಾಯ್ ಹೆಸರು ಇದರಲ್ಲಿದೆ. ಅಥವಾ ಸಂಸದ ಮನೋಜ್ ತಿವಾರಿ ಕೇಂದ್ರ ಸಚಿವ ಹರ್ಷ್ ಮಲ್ಗೊತ್ರಾ ಅವರನ್ನು ವಿಧಾನಸಭೆಗೆ ತರಬಹುದು ಎನ್ನಲಾಗಿದೆ.

 

Related Articles

error: Content is protected !!