Home » ಪತ್ನಿಯನ್ನು ಸಿಎಂ ಮಾಡುವ ಪ್ರಹಸನ
 

ಪತ್ನಿಯನ್ನು ಸಿಎಂ ಮಾಡುವ ಪ್ರಹಸನ

ಬಿಜೆಪಿ ಆರೋಪ

by Kundapur Xpress
Spread the love

ನವದೆಹಲಿ : ಕೇಬ್ರಿವಾಲ್ ರಾಜೀನಾಮೆ ಘೋಷಣೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂವಾಲ, ಕಟುವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಇದು ಪತ್ನಿಯನ್ನು ದಿಲ್ಲಿ ಮುಖ್ಯಮಂತ್ರಿ ಮಾಡುವ ಕೇಜ್ರವಾಲ್ ತಂತ್ರದ ಭಾಗವಾಗಿದೆ. ಅನಿವಾರ್ಯತೆಯನ್ನೇ ಲಾಭ ಮಾಡಿಕೊಳ್ಳುವ ವಿಚಾರದಲ್ಲಿ ಕೇಜ್ರವಾಲ್‌ ಪಿಎಚ್‌ಡಿ ಮಾಡಿದ್ದಾರೆಂದು ಟೀಕಿಸಿದ್ದಾರೆ

ನ್ಯಾಯಾಲಯ ಕೇಜ್ರವಾಲ್ ರನ್ನು ಅಬಾಕಾರಿ ನೀತಿ ಹಗರಣ ಪ್ರಕರಣದಲ್ಲಿ ದೋಷಮುಕ್ತಗೊಳಿಸಿಲ್ಲ. ಬದಲಾಗಿ ಅವರಿಗೆ ಷರತ್ತುಬದ್ಧ ಜಾಮೀನು ಮಾತ್ರ ನೀಡಿದೆ. ಪರಿಣಾಮ ಕೇಜ್ರವಾಲ್ ಮುಖ್ಯಮಂತ್ರಿ ಸ್ಥಾನದಿಂದ ಶಿಷ್ಟಾಚಾರ ಸಚಿವರಾಗಿ ಪರಿವರ್ತಿತರಾಗಿದ್ದಾರೆ. ಹೀಗಾಗೆ ಇವರು ರಾಜೀನಾಮೆ ಪ್ರಹಸನವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

   

Related Articles

error: Content is protected !!