ಹೊಸದಿಲ್ಲಿ : ಎಎಪಿ 11 ವರ್ಷಗಳ ಕಾಲ ದಿಲ್ಲಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಅವಧಿಯಲ್ಲಿ ಅವೆಷ್ಟೋ ಕಾರ್ಖಾನೆಗಳು ಮುಚ್ಚಿವೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ರಾಜಧಾನಿಯ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು
ದಿಲ್ಲಿ ವಿಧಾನಸಭಾ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದಿಲ್ಲಿಯಲ್ಲಿ ಎಎಪಿ ಸರ್ಕಾರದ ಕಾರ್ಯಕ್ಷಮತೆ ಟೀಕಿಸಿದ ಮೋದಿ, ಎಎಪಿ (ಸುಳ್ಳು ಭರವಸೆಗಳು ಮತ್ತು ಭ್ರಷ್ಟಾಚಾರ) ಅನ್ನು ಮೋದಿ ಭರವಸೆಗಳಿಗೆ ಹೋಲಿಸಿದರು. ಬಿಜೆಪಿಯ ಗೆಲುವಿನ ಬಗ್ಗೆ ಖಚಿತ ವಿಶ್ವಾಸ ವ್ಯಕ್ತಪಡಿಸಿದ ಅವರು, ಫೆ. 8 ರಂದು ಬಿಜೆಪಿ ಸರ್ಕಾರ ರಚಿಸಲಿದ್ದು, ಮಾರ್ಚ್ 8 ರೊಳಗೆ (ಅಂತರರಾಷ್ಟ್ರೀಯ ಮಹಿಳಾ ದಿನ) ಮಹಿಳೆಯರಿಗೆ 2,500 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ತಮ್ಮ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆಯೂ ಮತದಾರರಿಗೆ ಹೇಳಿದರು.