ಹೊಸದಿಲ್ಲಿ : ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂబుదిల్ల ಇದೊಂದು ತೀರಾ ಮೋಸದ ಚಟುವಟಿಕೆ. ಇದರ ಬಗ್ಗೆ ಜಾಗೃತರಾಗಿರಬೇಕು, ಎಚ್ಚರದಿಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ್ದಾರೆ. ತಮ್ಮ ಮನ್ ಕಿ ಬಾತ್ 115ನೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಅರೆಸ್ಟ್ ಬಗ್ಗೆ ಶೋತೃಗಳಿಗೆ ವಿಸ್ತ್ರತ ಮಾಹಿತಿ ನೀಡಿದರು.
ಡಿಜಿಟಲ್ ಅರೆಸ್ಟ್‌ನಂತಹ ಅಪರಾಧಗಳಲ್ಲಿ ಶಾಮೀಲಾಗುವವರು ಸಮಾಜದ್ರೋಹಿಗಳು. ಡಿಜಿಟಲ್ ಅರೆಸ್ಟ್ ಬೇರೇನಲ್ಲ, ತೀರಾ ಮೋಸ, ವಂಚನೆ, ಸುಳ್ಳಿನ ಕಂತೆ. ಕ್ರಿಮಿನಲ್‌ಗಳ ಗ್ಯಾಂಗ್ ಕೃತ್ಯವಿದಾಗಿದ್ದು, ಇದನ್ನು ಮಾಡುವವರು ಸಮಾಜದ ಶತ್ರುಗಳು ಎಂದು ಟೀಕಿಸಿದರು.
ಆನ್‌ಲೈನ್ ಅಪರಾಧಗಳ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿರುವುದು ತೀರಾ ಕಳವಳಕಾರಿ. ಇಂತಹ ವಂಚನೆ ಸ್ಟೀಮ್‌ಗಳನ್ನು ಮಟ್ಟಹಾಕುವಲ್ಲಿ ವಿವಿಧ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳಿಗೆ ಸಹಯೋಗ ನೀಡುತ್ತಿವೆ ಎಂದು ತಿಳಿಸಿದರು