Home » ಡ್ರಗ್ಸ್ : ಕರ್ನಾಟಕದ ಇಬ್ಬರ ಬಂಧನ
 

ಡ್ರಗ್ಸ್ : ಕರ್ನಾಟಕದ ಇಬ್ಬರ ಬಂಧನ

by Kundapur Xpress
Spread the love

ಅಮೃತಸರ : ಪ್ರತ್ಯೇಕ ಪ್ರಕರಣಗಳಲ್ಲಿ ಪಂಜಾಬ್ ಪೊಲೀಸರು ಅಂತಾರಾಷ್ಟ್ರೀಯ ಮಾದಕವಸ್ತು ಘಟಕ ಹಾಗೂ (ನಾರ್ಕೋ-ಆರ್ಮ್ಸ್ ಮಾಡ್ಯೂಲ್) ಮತ್ತು ಅಂತರ ರಾಜ್ಯ ಮಾದಕದ್ರವ್ಯ ಹವಾಲಾ ಭೇದಿಸಿ ಕರ್ನಾಟಕದ ಇಬ್ಬರು ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ಐದು ಅತ್ಯಾಧುನಿಕ ಪಿಸ್ತೂಲುಗಳು ನಗದು,  9.7 ಲಕ್ಷ ರೂ. ನಗದು ಹಾಗೂ 1.15  ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

ಮೊದಲ ಪ್ರಕರಣದಲ್ಲಿ, ಇತ್ತೀಚೆಗೆ ಮಲೇಷ್ಯಾದಿಂದ ಮರಳಿದ ಇಬ್ಬರು ಸೇರಿ 3 ಆರೋಪಿಗಳನ್ನು 5 ಅತ್ಯಾಧುನಿಕ ಪಿಸ್ತೂಲುಗಳು ಮತ್ತು ಹೆರಾಯಿನ್ನೊಂದಿಗೆ ಬಂಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ದಿಲ್ಲಿ, ಕರ್ನಾಟಕ ಮತ್ತು ದುಬೈಗೆ ಸಂಬಂಧಿಸಿದ ನಾರ್ಕೋ-ಹವಾಲಾ ಜಾಲದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಜಾಲ ಹವಾಲಾ ಮಾರ್ಗಗಳ ಮೂಲಕ ದುಬೈಗೆ ರವಾನಿಸುತ್ತಿತ್ತು ಎಂದು ಹೇಳಿದ್ದಾರೆ. 

 

Related Articles

error: Content is protected !!