Home » 2700 ದಾಟಿದ ಮೃತರ ಸಂಖ್ಯೆ
 

2700 ದಾಟಿದ ಮೃತರ ಸಂಖ್ಯೆ

ಮ್ಯಾನ್ಮಾರ್ ಭೀಕರ ಭೂಕಂಪ

by Kundapur Xpress
Spread the love

ಬ್ಯಾಂಕಾಕ್ : ಮ್ಯಾನ್ಮಾರ್‌ನಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2,700 ದಾಟಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆಯಾದರೂ, ಅವರೆಲ್ಲಾ ಬದುಕಿರುವ ಸಾಧ್ಯತೆ ಕ್ಷೀಣಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು 2,719 ಮಂದಿ ಸಾವನ್ನಪ್ಪಿದ್ದು, 4,521 ಮಂದಿ ಗಾಯಗೊಂಡಿದ್ದಾರೆ. 441 ಜನ ಕಾಣೆಯಾಗಿದ್ದಾರೆ’ ಎಂದು ಹೇಳಿದ್ದಾರೆ.

ಭೂಕಂಪದ ಚಿತ್ರ ಸೆರೆ ಹಿಡಿದ ಇಸ್ರೋ :

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಾರ್ಟೋಸಾಟ್-3 ಉಪಗ್ರಹವು ಭೂಕಂಪದಿಂದ ಉಂಟಾದ ಅಪಾರ ಹಾನಿಯ ಚಿತ್ರಗಳನ್ನು ಸೆರೆಹಿಡಿದಿವೆ. ಮಾ.29ರಂದು ಇದನ್ನು ಪಡೆದಿದ್ದು, ಭೂಕಂಪಕ್ಕೂ ಮುನ್ನ ಸೆರೆಹಿಡಿದ ಚಿತ್ರಗಳೊಂದಿಗೆ ಅವುಗಳನ್ನು ಹೋಲಿಸಿ ನೋಡಲಾಗುತ್ತಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೋ, ‘ಮ್ಯಾಂಡಲೆ ಸೇರಿ ಹಲವು ನಗರಗಳಲ್ಲಿ ಮೂಲ ಸೌಕರ್ಯಗಳಿಗೆ ಅಪಾರ ಹಾನಿಯಾಗಿರುವುದು ಕಂಡುಬಂದಿದೆ. ಸಗೈಂಗ್‌ನಲ್ಲಿ ಹಲವು ಕಟ್ಟಡಗಳಿಗೆ ಭಾಗಶಃ ಅಥವಾ ಸಂಪೂರ್ಣ ಹಾನಿಯಾಗಿದೆ’ ಎಂದು ತಿಳಿಸಿದೆ.

 

Related Articles

error: Content is protected !!