ಕೆವಾಡಿಯಾ – ಗುಜರಾತ್ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸುಧಾರಣೆಯಾಗಿರುವ ‘ಒಂದು ದೇಶ ಒಂದು ಚುನಾ ವಣೆ’ ಪ್ರಸ್ತಾವವನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುತ್ತಿದೆ. ಇದೇ ವರ್ಷ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗು ತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ.
ಸಾಮಾನ್ಯವಾಗಿ, ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್-ಡಿಸೆಂಬರ್ ಅವಧಿ ಯಲ್ಲಿ ನಡೆಯುತ್ತದೆ. ಹೀಗಾಗಿ ಈ ಮಹತ್ವದ ಸುಧಾರಣಾ ವಿಧೇಯಕ ಇನ್ನೊಂದು ತಿಂಗಳಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 149 ನೇ ಜನ್ಮ ಸ್ಮರಣೆಯ ಹಿನ್ನಲೆಯಲ್ಲಿಗುಜರಾತಿನ ಕೆವಾಡಿಯದಲ್ಲಿರುವ ಅವರ ಪ್ರತಿಮೆಗೆ ನಮಿಸಿ ಮಾತನಾಡಿದರು
ಆದರೆ ಮೋದಿ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ಕೊಟ್ಟಿದ್ದಾರೆ. ಏಕ ಚುನಾವಣೆಯನ್ನು ಮೋದಿ ಅವರು ಜಾರಿಗೆ ತರುವುದಿಲ್ಲ. ಏಕೆಂದರೆ ಅದರ ಅನುಷ್ಠಾನಕ್ಕೆ ಪ್ರತಿಯೊಬ್ಬರನ್ನೂ ಸಂಸತ್ತಿನಲ್ಲಿ ವಿಶ್ವಾಸಕ್ಕೆ ಪಡೆಯಬೇಕು. ಆಗ ಮಾತ್ರ ಸಾಧ್ಯ. ಹೀಗಾಗಿ ಒಂದು ದೇಶ ಒಂದು ಚುನಾವಣೆ ಜಾರಿ ಸಾಧ್ಯವೇ ಇಲ್ಲಎಂದಿದ್ದಾರೆ