ಶ್ರೀನಗರ : ಜಮ್ಮು -ಕಾಶ್ಮೀರದಲ್ಲಿ ಮಂಗಳವಾರ ಸಂಜೆ 5 ಗಂಟೆಯವರೆಗೆ ಶೇಕಡಾ 59 ಮತದಾರರು ಮತ ಚಲಾಯಿಸಿದರು. 2019 ರ ನಂತರ ಕೇಂದ್ರಾಡಳಿತ ಪ್ರದೇಶದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡದ್ದು ಗಮನ ಸೆಳೆಯಿತು. 90 ಸ್ಥಾನಗಳ ಪೈಕಿ ಕಾಶ್ಮೀರದ 16 ಮತ್ತು ಜಮ್ಮುವಿನ 8 ಸ್ಥಾನಗಳೂ ಸೇರಿದಂತೆ ಒಟ್ಟು 24 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಿತು. 90 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 219 ಅಭ್ಯರ್ಥಿಗಳ ಭವಿಷ್ಯವನ್ನು ಈ ಮೊದಲ ಹಂತದ ಮತದಾನ ನಿರ್ಧರಿಸಿತು.
ಬೆಳಗ್ಗೆಯಿಂದಲೇ ಮತದಾರರ ಉದ್ದನೆಯ ಸಾಲುಗಳು ಕಂಡುಬಂದವು. ಸಂಜೆ 5 ಗಂಟೆಗೆ, ಮತದಾನ ಮುಗಿಯುವ ಒಂದು ಗಂಟೆ ಮೊದಲು, ಮತದಾನ ಪ್ರಮಾಣ ಶೇ. 58.19 ಕ್ಕೆ ತಲುಪಿತ್ತು.
ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಮತ್ತು 2019 ರ ಆಗಸ್ಟ್‌ನಲ್ಲಿ ರಾಜ್ಯವನ್ನು ಜಮ್ಮು – ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಬಳಿಕ 90 ಸದಸ್ಯರ ವಿಧಾನಸಭೆಗೆ ಚುನಾವಣೆ ನಡೆಯಿತು