Home » ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಅಗತ್ಯವಿಲ್ಲ
 

ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಅಗತ್ಯವಿಲ್ಲ

ನಿತಿನ್‌ ಗಡ್ಕರಿ

by Kundapur Xpress
Spread the love

ನವದೆಹಲಿ : ‘ದೇಶದಲ್ಲಿ ಎಲೆಕ್ನಿಕ್ ವಾಹನಗಳಿಗೆ ಇನ್ನು ಮುಂದೆ ಸಬ್ಸಿಡಿಗಳನ್ನು ನೀಡುವ ಅಗತ್ಯ ಇಲ್ಲ’ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಮಾರಂಭವೊಂದ ರಲ್ಲಿ ಅವರು ಮಾತನಾಡಿ, ಎಲೆಕ್ಟ್ರಿಕಲ್ ವಾಹನಗಳಿಗೆ ಬಳಸುವ ಬ್ಯಾಟರಿಗಳ ಬೆಲೆ ದೇಶದಲ್ಲಿ ಕಡಿಮೆಯಾಗಿದೆ. ಜೊತೆಗೆ ಹೆಚ್ಚುತ್ತಿರುವ ಅಳವಡಿಕೆಯಿಂದ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕಲ್  ವೆಹಿಕಲ್‌ಗಳು ಕೈಗೆಟಕುವ ದರದಲ್ಲಿ ಸಿಗುವಂತಾಗಲಿದೆ. ಗ್ರಾಹಕರು ಈಗ ಎಲೆಕ್ಟಿಕಲ್ ವಾಹನಗಳನ್ನು ಮತ್ತು ಸಿಎನ್‌ಜಿ ವಾಹನಗಳನ್ನು ತಾವಾಗಿಯೇ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ನಾವು ಸಬ್ಸಿಡಿಗಳನ್ನು ನೀಡಬೇಕಾದ ಅಗತ್ಯವಿಲ್ಲ ಅನಿಸುತ್ತದೆ’ ಎಂದರು. ಬ್ಯಾಟರಿಗಳ ಬೆಲೆ ದುಬಾರಿ ಇದ್ದ ಕಾರಣ ಎಲೆಕ್ಟಿಕಲ್ ವಾಹನಗಳು ಕೂಡ ದುಬಾರಿ ಆಗಿದ್ದವು. ದುಬಾರಿ ಎಂಬ ಕಾರಣ ಜನರು ಇವುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಆದ್ದರಿಂದ ಖರೀದಿ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ

   

Related Articles

error: Content is protected !!