ನವದೆಹಲಿ : ಬಿಜೆಪಿ ಸಂಸದೆ, ನಟಿ ಕಂಗನಾ ರಾಣಾವತ್ ಅಭಿನಯದ ಬಹು ನಿರೀಕ್ಷಿತ ‘ಎಮರ್ಜೆನಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜ.17ರಂದು ಸಿನಿಮಾ ತೆರೆಗೆ ಬರಲಿದೆ ನಟಿ ಕಂಗನಾ ಈ ಸಿನಿಮಾದಲ್ಲಿ ಅಭಿನಯದ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತಿದ್ದಾರೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಾಧರಿತ ಈ ಸಿನಿಮಾ ಕಳೆದ ವರ್ಷದ ಸೆ.6ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಡ್ ಸರ್ಟಿಫಿಕೇಶನ್ ಸಿಗದ ಕಾರಣ ಮುಂದೂಡಿಕೆಯಾಗಿತ್ತು. ಅಲ್ಲದೇ ಬಿಡುಗಡೆಗೆ ಶಿರೋಮಣಿ ಅಕಾಲಿದಳ ಸೇರಿದಂತೆ ಸಿಖ್ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು. ಟ್ರೇಲರ್ ರಿಲೀಸ್ ಬಳಿಕ ಕಂಗನಾ ಈ ಬಗ್ಗೆ ತಮ್ಮ ಖುಷಿ ಹಂಚಿಕೊಂಡಿದ್ದು ‘ಕೊನೆಗೂ ಜ.17ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ಸಂತೋಷವಾಗಿದೆ. ಇದು ಕೇವಲ ವಿವಾದಾತ್ಮಕ ನಾಯಕಿ ಬಗ್ಗೆಗಿನ ಕಥೆಯಲ್ಲ ಪ್ರಸ್ತುತ ವಿಷಯಗಳ ಬಗ್ಗೆಯೂ ಹೇಳುತ್ತದೆ. ರಾಜಕೀಯ ನಾಟಕದ ನಡುವೆ ಸಿನಿಮಾ ಬಿಡುಗಡೆ ಸವಾಲಿನಿಂದ ಕೂಡಿತ್ತು ಎಂದಿದ್ದಾರೆ.